ದಾವಣಗೆರೆ: ಒಂಟಿ ವೃದ್ಧೆಯ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಬಾಯಿಗೆ ಬಟ್ಟೆ ತುರುಕಿ ಕೊರಳಿನಲ್ಲಿದ್ದ 8,55,000 ರೂ ಮೌಲ್ಯದ 190 ಗ್ರಾಂ ಚಿನ್ನಾಭರಣ ದೋಚಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ: 12.10.2022 ರಂದು ಹನುಮನ್ವ ಎಂಬ ವೃದ್ಧೆ ಮಧ್ಯಾಹ್ನ 12:೦೦ ಗಂಟೆ ಸಮಯದಲ್ಲಿ ಮನೆಯ ಪಾರ್ಕ್ ಹತ್ತಿರವಿರುವ ದೇವಸ್ಥಾನಕ್ಕೆ ಹೋಗಿ ವಾಪಸ್ ಬಂದ ಸಮಯದಲ್ಲಿ ಮನೆಯ ಬೀಗವನ್ನು ತೆಗೆಯುತ್ತಿರುವಾಗ ಹಿಂದಿನಿಂದ ಬಂದ ಎರಡು ಜನ ಅಪರಿಚಿತರು. ಮನೆ ಬಾಡಿಗೆ ಇದೆಯೇ ಅಂತಾ ಕೇಳಿದ್ದು, ಇಲ್ಲಾ ಅಂತಾ ಹೇಳಿ ಮನೆಯ ಒಳಗೆ ಹೋಗುತ್ತಿರುವಾಗ ಹಿಂದಿನಿಂದ ಏಕಾಏಕಿ ಮನೆಯ ಒಳಗೆ ತಳ್ಳಿ ವೇಲನ್ನು ಬಾಯಿಗೆ ತುರುಕಿ ಕೈಗಳಿಂದ ಗುದ್ದಿದ್ದಾರೆ. ಕೊರಳಿನಲ್ಲಿದ ಸುಮಾರು 8,55,000/- ರೂ ಮೌಲ್ಯದ 190 ಗ್ರಾಂ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಚರಣೆಯನ್ನು ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ ತಾಮ್ರಧ್ವಜ ಮತ್ತು ಕೆಟಿಜೆ ನಗರ ವೃತ್ತ ನಿರೀಕ್ಷಕ ಶಶಿಧರ ಯು ಜೆ ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಪಿಎಸ್‌ಐ ಪ್ರವೀಣ್ ವಾಲೀಕರ್, ರೇಣುಕಾ ಜಿ.ಎಂ ಹಾಗೂ ಎಎಸ್‌ಐ ತಿಪ್ಪೇಸ್ವಾಮಿ ಕೆ. ಎಂ. ಸಿಬ್ಬಂದಿಗಳಾದ ಆನಂದ ಮೂಂದಲಮನೆ, ತಿಮ್ಮಣ್ಣ ಎನ್.ಆರ್, ಯೋಗೇಶ ನಾಯ್ಕ, ಭೋಜಪ್ಪ, ಕಿಚಡಿ, ಗೋಪಿನಾಥ ಬಿ ನಾಯ್ಕ, ಮಂಜಪ್ಪ, ರಾಘವೇಂದ್ರ, ಮಾಲತೇಶ, ಶಾಂತರಾಜ ರವರನ್ನೊಳಗೊಂಡ ತಂಡವು ಆರೋಪಿತರಾದ 01) ಸಚ್ಚಿನ್ ಶಿರಿಗೇರಿ, ಓಮಿನಿ ಡ್ರೈವರ್ ಕೆಲಸ, ಧಾರವಾಡ ನಗರ, 02) ಚೇತನ ಕುಮಾರ ಪಿ., ಜಗಳೂರು ತಾ, ಪತ್ತೆ ಮಾಡಿ ಆರೋಪಿತರಿಂದ ಸುಮಾರು 7.65.000/- ರೂ ಬೆಲೆ ಬಾಳುವ 170 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿತರ ವಿರುದ್ಧ ತನಿಖೆ ಮುಂದುವರಿದಿರುತ್ತದೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ & ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಐಪಿಎಸ್, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ.ಬಸರಗಿ ಶ್ಲಾಘಿಸಿದ್ದಾರೆ.



