ದಾವಣಗೆರೆ; ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂತರಾಜ್ಯ ಮನೆಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 39,62,400 ರೂ ಮೌಲ್ಯದ 762 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ 10.0೦೦/-ರೂ ನಗದು ಬಹುಮಾನವನ್ನು ಘೋಷಿಸಿಸಲಾಗಿದೆ.
ದಾವಣಗೆರೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ:- 05.05.2023 ರಂದು ರುದ್ರಪ್ಪ ಎನ್ನುವವರು ಮನೆಯ ಬೀಗವನ್ನು ಹಾಕಿಕೊಂಡು ಹೊರ ಹೋಗಿದ್ದಾರೆ. ಮಧ್ಯಾಹ್ನ ಬಂದು ನೋಡಿದ್ದಾಗ ಯಾರೋ ಕಳ್ಳರು ಮನೆಯ ಒಳಗೆ ಹೋಗಿ ಬೀರುವಿನಲ್ಲಿಟ್ಟದ 285ಗ್ರಾಂ ತೂಕದ ಬಂಗಾರದ ಆಭರಣಗಳು & 1.50.000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡುಹೋಗಿರುತ್ತಾರೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣಗಳ ಆರೋಪಿತರನ್ನು ಮತ್ತು ಮಾಲು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ನಿರ್ದೇಶನದಲ್ಲಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ದೊಡ್ಡಮನಿ ಹಾಗೂ ರುದ್ರೇಶ ಎ ಕೆ ರವರ ಮಾರ್ಗದರ್ಶನಲ್ಲಿ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯ
ಪೊಲೀಸ್ ನಿರೀಕ್ಷಕರಾದ ಶಶಿಧರ ಯು ಜೆ ರವರ ನೇತೃತ್ವದ ತಂಡ ಆರೋಪಿತರಾದ 01]. ರಾಜ @ ಪೋತರಾಜ್ @ ಸದ್ದಾಂ ತಂದೆ ಬಾಲರಾಜ್ @ ಚೆನ್ನಪ್ಪ, 31 ವರ್ಷ, ಆಟೋ ಡ್ರೈವರ್ ಕೆಲಸ ವಾಸ ಕುಪ್ಪಿನಕೆರೆ ಗ್ರಾಮ, ಕೂಡ್ಲಿಗಿ ತಾ, ವಿಜಯನಗರ ಜಿಲ್ಲೆ 02].ಮನು @ ಮನ್ಸೂರ ತಂದೆ ಚೆನ್ನಪ್ಪ, 35 ವರ್ಷ, ಗಾರೆ ಕೆಲಸ ವಾಸ ಚೌಡಮ್ಮ ದೇವಸ್ಥಾನ ಮುಂಬಾಗ ಕೊರಚರಹಟ್ಟಿ ನಿಟ್ಟುವಳ್ಳಿ ದಾವಣಗೆರೆ ವಾಸ ಗಡಬನಹಳ್ಳಿ ಗ್ರಾಮ, ಚಿಕ್ಕಮಗಳೂರು. 03]. ಜಗಧೀಶ ಹೆಚ್ ಎಲ್ ತಂದೆ ಲಕ್ಷ್ಮಣ, 22 ವರ್ಷ ಗಾರೆ ಕೆಲಸ ವಾಸ ಗಡಬನಹಳ್ಳಿ ಗ್ರಾಮ ಚಿಕ್ಕಮಗಳೂರು. 04]. ಗೀರೀಶ ಹೆಚ್ ಎಲ್ ತಂದೆ ಲಕ್ಷ್ಮಣ, 22 ವರ್ಷ ಗಾರೆ ಕೆಲಸ ವಾಸ ಗಡಬನಹಳ್ಳಿ ಚಿಕ್ಕಮಗಳೂರು, ಇವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಕಟಿಜೆ ನಗರ ಠಾಣೆಯಲ್ಲಿ ವರದಿಯಾದ ಒಂದು ಪ್ರಕರಣ, ಚಿಕ್ಕಮಗಳೂರು ನಗರದಲ್ಲಿ ಎರಡು ಪ್ರಕರಣ, ಹಾಸನದ ಒಂದು ಪ್ರಕರಣ & ಆಂಧ್ರಪ್ರದೇಶ ರಾಜ್ಯದ ಚಿತ್ತೂರು-2 ಟೌನ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಒಂದು ಪ್ರಕರಣವನ್ನು ಪತ್ತೆ ಮಾಡಿ ಕಳ್ಳತನವಾದ ಒಟ್ಟು 850 ಗ್ರಾಂ ಬಂಗಾರದ ಆಭರಣಗಳಲ್ಲಿ 762 ಗ್ರಾಂ ಬಂಗಾರದ ಆಭರಣಗಳನ್ನು
ವಶಪಡಿಸಿಕೊಂಡಿದ್ದು ಉಳಿದ ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳಲು ಬಾಕಿಯಿದ್ದು ತನಿಖೆ ಮುಂದುವರಿದಿರುತ್ತದೆ.
ಆರೋಪಿತರನ್ನು & ಮಾಲನ್ನು ಪತ್ತೆ ಮಾಡಿದ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ಡಿ ಹಾಗೂ ರುದ್ರೇಶ ಎ ಕೆ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಶಶಿಧರ ಯು ಜೆ, ಪಿಎಸ್‌ಐ ಎನ್ ಆರ್ ಕಾಟೆ, ವಿಶ್ವನಾಥ ಜಿ ಎನ್. ಮಂಜುನಾಥ ಕಲ್ಲೇದೇವರು & ಕೆಜೆ ನಗರ ಪೊಲೀಸ್ ಠಾಣೆಯ
ಅಪರಾಧ ವಿಭಾಗದ ಸಿಬ್ಬಂದಿಗಳಾದ ಪ್ರಕಾಶ ಟಿ, ಶಂಕರ ಆರ್ ಜಾಧವ್, ತಿಮ್ಮಣ್ಣ ಎನ್ ಆರ್. ಮಂಜಪ್ಪ ಎಂ, ಷಣ್ಮುಖ.ಕೆ, ಶಿವರಾಜ ಎಂ. ಎಸ್ ಪುಷ್ಪಲತಾ, ವತ್ಸಲ, ಅಕ್ತರ್ ಎಸ್ ಎಂ , ನಾಗರಾಜ ಕುಂಬಾರ, ವಿರೇಶ, ಮಾರುತಿ, ರಾಘವೇಂದ್ರ, ಶಾಂತರಾಜ್ ರವರ ಪತ್ತೆ ಕಾರ್ಯವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|| ಅರುಣ ಕೆ ಶ್ಲಾಘಿಸಿದ್ದು , ಪತ್ತೆ ಕಾರ್ಯ ತಂಡಕ್ಕೆ 10000/-ರೂ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.