ದಾವಣಗೆರೆ: ವಿದ್ಯಾನಗರ, ಬಡಾವಣೆ, ಬಸವನಗರ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 2,50,000 ರೂ. ಬೆಲೆ ಬಾಳುವ ಒಟ್ಟು 07 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿರುವ ರೆಡ್ ಫೋರ್ಟ್ ಹೋಟೇಲ್ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುತ್ತದೆ ಎಂದು ದಿನಾಂಕ:23.10.2022 ರಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆರೋಪಿ ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪ್ರಭಾವತಿ ಸಿ ಸೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಠಾಣೆ, ಎಂ.ಎಸ್ ದೊಡ್ಡಮನಿ ಪಿ.ಎಸ್.ಐ, ರೇಣುಕಾ ಜಿ.ಎಂ ಪಿ.ಎಸ್.ಐ ವಿದ್ಯಾನಗರ ಠಾಣೆ ಹಾಗೂ ವಿದ್ಯಾನಗರ ಠಾಣೆಯ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿದ್ದು ಸದರಿ ತಂಡವು ಒಬ್ಬ ಆರೋಪಿತನನ್ನು ಬಂದಿಸಿದೆ. ಆರೋಪಿಯಿಂದ ಒಟ್ಟು 2,50,000/-ರೂ ಬೆಲೆ ಬಾಳುವ ಒಟ್ಟು 07 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತನಿಂದ ವಿದ್ಯಾನಗರ, ಬಡಾವಣೆ, ಬಸವನಗರ ಪೊಲೀಸ್ ಠಾಣೆಯ ಒಟ್ಟು 08 ಪ್ರಕರಣಗಳು ಪತ್ತೆಯಾಗಿರುತ್ತದೆ. ಆರೋಪಿ & ಮಾಲನ್ನು ಪತ್ತೆ ಮಾಡಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗೆ ಎಸ್ಪಿ ಸಿ.ಬಿ ರಿಷ್ಯಂತ್ ಮತ್ತು ಹೆಚ್ಚುವರಿ ಎಸ್ಪಿ ಆರ್.ಬಿ ಬಸರಗಿ ಶ್ಲಾಘಿಸಿದ್ದಾರೆ.



