ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಆರೋಪಿಗಳ ಬಂಧನ ಮಾಡಿದ್ದು, 25 ಸಾವಿರ ಮೌಲ್ಯದ ಗಾಂಜಾ ಸೊಪ್ಪು ವಶಕ್ಕೆ ಪಡೆಯಲಾಗಿದೆ.
ಕೆ.ಟಿ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ವಿದ್ಯುತ್‌ನಗರದ ಮುಖ್ಯರಸ್ತೆಯ ಕೆ.ಪಿ.ಟಿ.ಸಿ.ಎಲ್.
ಮುಂಭಾಗದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಗಾಂಜಾ ಸೊಪ್ಪನ್ನು ಇಟ್ಟುಕೊಂಡಿದ್ದ ಆರೋಪಿಗಳಾದ ದಾವಣಗೆರೆಯ 01) ಸತೀಶ್ (42), 02)ಮಹಮದ್ ರಫೀಕ್( 25), 03) ಮೈಸೂರಿನ ಸೈಯಾದ್ ಫರೂಕ್ ( 35) ಬಂಧಿಸಲಾಗಿದೆ. ಆರೋಪಿಗಳಿಂದ 25,000/-ರೂಪಾಯಿ ಬೆಲೆಬಾಳುವ ಒಟ್ಟು 410 ಗ್ರಾಂ ತೂಕದ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್.ಡಿ ನೇತೃತ್ವದಲ್ಲಿ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಶಿಧರ್, ಪ್ರಭಾವತಿ ಶ್ವೇತಸನಾದಿ,ಪಿಎಸ್ ಐ ಜಿ.ಎನ್. ವಿಶ್ವನಾಥ್, ಸಿಬ್ಬಂದಿ ಪ್ರಕಾಶ್, ಶಂಕರ್ ಜಾಧವ್, ಶಿವರಾಜ್, ಮಂಜಪ್ಪ, ಷಣ್ಮುಖ, ಮಂಜನಗೌಡ, ಬಿ.ಆರ್. ರವಿ
ಒಳಗೊಂಡ ತಂಡ ಕಾರ್ಯಾಚರಣೆ ನಡೆದಿದೆ.
ಈ ಸಂಬಂಧ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿರುತ್ತದೆ. ಪೊಲೀಸ್ ಕಾರ್ಯಾಚರಣೆಗೆ ಪೊಲೀಸ್ ಅಧೀಕ್ಷ ಸಿ.ಬಿ ರಿಷ್ಯಂತ್ , ಹೆಚ್ಚುವರಿ ಪೊಲೀಸ್
ಅಧೀಕ್ಷಕ ರಾಮಗೊಂಡ ಬಿ ಬಸರಗಿ ಪ್ರಶಂಸಿದ್ದಾರೆ.



