Connect with us

Dvgsuddi Kannada | online news portal | Kannada news online

ಪೆಟ್ರೋಲ್: ರಾಮನ ರಾಷ್ಟ್ರದಲ್ಲಿ93, ರಾವಣನ ಲಂಕಾದಲ್ಲಿ 51 ರೂಪಾಯಿ: ಸ್ವಪಕ್ಷೀಯರ ವಿರುದ್ಧ ಸುಬ್ರಹ್ಮಣಿಯನ್ ಕಿಡಿ

ರಾಷ್ಟ್ರ ಸುದ್ದಿ

ಪೆಟ್ರೋಲ್: ರಾಮನ ರಾಷ್ಟ್ರದಲ್ಲಿ93, ರಾವಣನ ಲಂಕಾದಲ್ಲಿ 51 ರೂಪಾಯಿ: ಸ್ವಪಕ್ಷೀಯರ ವಿರುದ್ಧ ಸುಬ್ರಹ್ಮಣಿಯನ್ ಕಿಡಿ

ನವದೆಹಲಿಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ತಮ್ಮ ಸ್ವಪಕ್ಷದ ವಿರುದ್ಧ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.ಈ ಬಾರಿ ಪೆಟ್ರೋಲ್ ಬೆಲೆ ವಿಷಯಕ್ಕಾಗಿ ಕೇಂದ್ರದ ಸರ್ಕಾರದ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್ ದರ ಏರಿಕೆ ವಿರುದ್ಧ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ. ಕೇಂದ್ರ ಬಜೆಟ್-2021 ಮಂಡನೆಯಾದ ಬಳಿಕ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಈ ಫೋಟೋ ಹಂಚಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ. ಭಾರತ ಹಾಗೂ ನೆರೆ ರಾಷ್ಟ್ರಗಳಲ್ಲಿನ ಪೆಟ್ರೋಲ್ ಬೆಲೆ ಹೋಲಿಕೆ ಮಾಡಿದ್ದಾರೆ.

ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 93 ರೂಪಾಯಿಗಳಾಗಿದೆ. ಸೀತೆಯ ನೇಪಾಳದಲ್ಲಿ ಪ್ರತಿ ಲೀಟರ್ ಗೆ 53 ರೂಪಾಯಿಗಳಾಗಿದ್ದರೆ ರಾವಣನ ಲಂಕೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 51 ರೂಪಾಯಿಗಳು ಎಂದು ಬರೆದಿದ್ದು, ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿ ಹಾಗೂ ಮುಂಬೈ ಗಳಲ್ಲಿ ಪೆಟ್ರೋಲ್ ಬೆಲೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 86.30 ರೂಪಾಯಿ ಹಾಗೂ 92.86 ರೂಪಾಯಿಗಳಷ್ಟಾಗಿದೆ. ಡೀಸೆಲ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 76.48 ರೂಪಾಯಿಗಳಿದ್ದರೆ ಮುಂಬೈ ನಲ್ಲಿ 83.30 ರೂಪಾಯಿಗಳಷ್ಟಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top