Connect with us

Dvgsuddi Kannada | online news portal | Kannada news online

ದಾವಣಗೆರೆ: ಗ್ಯಾಸ್‌ ಕಟರ್‌ ಮೂಲಕ ಬ್ಯಾಂಕ್ ಲಾಕರ್ ಕಟ್ ಮಾಡಿದ ಖತರ್ನಾಕ್ ದರೋಡೆ ಗ್ಯಾಂಗ್ ; 12.95 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ..!!

ದಾವಣಗೆರೆ

ದಾವಣಗೆರೆ: ಗ್ಯಾಸ್‌ ಕಟರ್‌ ಮೂಲಕ ಬ್ಯಾಂಕ್ ಲಾಕರ್ ಕಟ್ ಮಾಡಿದ ಖತರ್ನಾಕ್ ದರೋಡೆ ಗ್ಯಾಂಗ್ ; 12.95 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ..!!

ದಾವಣಗೆರೆ: ಗ್ಯಾಸ್‌ ಕಟರ್‌ ಮೂಲಕ ಬ್ಯಾಂಕ್ ಕಿಟಕಿ ಮುರಿದು ಒಳನುಗ್ಗಿದ ಖತರ್ನಾಕ್ ದರೋಡೆಕೋರರು, ಬ್ಯಾಂಕ್ ಭದ್ರತಾ ಲಾಕರ್‌ ಕಟ್ ಮಾಡಿ ಬರೋಬ್ಬರಿ 12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ‌ಬಹಳ ಬುದ್ದಿವಂತಿಕೆಯಿಂದ ಕಳ್ಳತನ ಮಾಡಿದಂತೆ ಕಾಣುವ ಖತರ್ನಾಕ್ ಗ್ಯಾಂಗ್ , ಪೊಲೀಸ್ ಶ್ವಾನಗಳಿಗೂ ಸಣ್ಣ ಸುಳಿವು ಸಿಗದಂತೆ, ಸಿ.ಸಿ.ಟಿ.ವಿ, ಸೈರನ್‌ ಕಟ್ ಮಾಡಿ ಬ್ಯಾಂಕ್ ತುಂಬಾ ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ.

ಜಿಲ್ಲೆಯ ನ್ಯಾಮತಿ ಪಟ್ಟಣದ ಮುಖ್ಯ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್‌ ಕಿಟಕಿ ಕಟ್ ಮಾಡಿ ಒಳ ನುಗ್ಗಿರುವ ದುಷ್ಕರ್ಮಿಗಳು, ಗ್ಯಾಸ್‌ ಕಟರ್‌ ಮೂಲಕ ಭದ್ರತಾ ಕೊಠಡಿಯ ಬಾಗಿಲು ಮುರಿದಿದ್ದಾರೆ. ಮೂರು ಲಾಕರ್‌ಗಳಲ್ಲಿ ಚಿನ್ನಾಭರಣವಿದ್ದ ಲಾಕರ್‌ ಅನ್ನು ಗ್ಯಾಸ್‌ ಕಟರ್ ಬಳಸಿ ಕತ್ತರಿಸಿದ್ದಾರೆ. ಇನ್ನೂ ಎರಡು ಲಾಕರ್‌ ಮುರಿಯಲು ಸಾಧ್ಯವಾಗಿಲ್ಲ.

ಖತರ್ನಾಕ್ ಗ್ಯಾಂಗ್ ದರೋಡೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಯಾವುದೇ ಸಣ್ಣ ಸುಳಿವು ಬಿಡದಂತೆ ವ್ಯವಸ್ಥಿತವಾಗಿ ಯೋಜನೆ ರೂಪಿಸಿದ್ದಾರೆ.ಈ ಕೇಸ್ ಪೊಲೀಸರಿಗೂ ತಲೆನೋವಾಗಿದೆ. ಕಳ್ಳರ ಓಡಾಟ, ಬೆವರು ವಾಸನೆ ಜಾಡು ಹಿಡಿದು ಕಳ್ಳರನ್ನು ಪೊಲೀಸ್ ಶ್ವಾನಗಳು ಹಿಡಿದು ಬಿಡುತ್ತವೆ. ಆದರೆ, ಈ ದರೋಡೆ ಗ್ಯಾಂಗ್, ಪೊಲೀಸರ ಶ್ವಾನಗಳಿಗೂ ಯಾವುದೇ ಸುಳಿವು ಸಿಗದಂತೆ ಮಾಡಿದ್ದಾರೆ. ತಾವೂ ಓಡಾಡಿದ ಕಡೆಯಲ್ಲೆಲ್ಲಾ ಖಾರದ ಪುಡಿ ಎರಚಿದ್ದಾರೆ. ಬ್ಯಾಂಕ್ ಸಿಸಿಟಿವಿ ಇಲ್ಲದಿದ್ದರಿಂದ ಪೊಲೀಸರು ಇಡೀ ನಗರದ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.ಲಾಕರ್‌ನಲ್ಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದ ಗ್ರಾಹಕರು ಆತಂಕಗೊಂಡಿದ್ದಾರೆ.

ಬೆಳಿಗ್ಗೆ ಕರ್ತವ್ಯಕ್ಕೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಕ್ಕೆ ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶ್ವಾನದಳ ಸವಳಂಗ ರಸ್ತೆ‌ವರೆಗೆ ಪರಿಶೀಲಿಸಿದೆ. ಮುಖ್ಯರಸ್ತೆಗೆ ಹೊಂದಿಕೊಂಡ ಬ್ಯಾಂಕ್‌ನ ಬಾಗಿಲು ಮುಚ್ಚಿದ್ದರಿಂದ ಈ ಕೃತ್ಯ ಸಾರ್ವಜನಿಕರ ತಕ್ಷಣ ಗೊತ್ತಾಗುಲ್ಲ. ಸಾಲಬಾಳು ರಸ್ತೆಯ ಪೆಟ್ರೋಲ್‌ಸಿ.ಸಿ.ಟಿವಿ ಕ್ಯಾಮೆರಾ ದೃಶ್ಯವನ್ನು ಪೊಲೀಸರು ಪರಿಶೀಲಿಸಿದ್ದಾರೆ. ಪೂರ್ವ ವಲಯದ ಡಿಐಜಿ ಬಿ.ರಮೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬ್ಯಾಂಕ್‌ಗೆ ರಾತ್ರಿ ವೇಳೆ ಕಾವಲುಗಾರ ನೇಮಿಸಿರಲಿಲ್ಲ. ಹಳೆಯ ಕಾಲದ ಸೈರನ್‌ , ಬ್ಯಾಂಕ್‌ ಭದ್ರತಾ ಲೋಪದಿಂದ ಈ ಕೃತ್ಯ ನಡೆದಿದೆ. ಈ ಬಗ್ಗೆ ಪ್ರಕರಣ ತನಿಖೆಗೆ ಐವರು ಪೊಲೀಸ್‌ ಇನ್‌ಸ್ಟೆಕ್ಟರ್‌, 10 ಜನ ಪಿಎಸ್‌ಐ ಗಳ ತಂಡ ರಚಿಸಲಾಗಿದೆ. ಈಗಾಗಲೇ ತನಿಖೆ ಆರಂಭವಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, Informative, Education, job, local (davangere), crime, agriculture, Sports News in Kannada. ಡಿವಿಜಿಸುದ್ದಿ. ಕಾಂ ‌ಆನ್ ಲೈನ್ ನ್ಯೂಸ್ ಪೋರ್ಟಲ್‌ ಆಗಿದ್ದು, ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ಸುದ್ದಿ‌ ಕೊಡುವುದು ಮೊದಲ ಆದ್ಯತೆ. ಸ್ಥಳೀಯ ಸುದ್ದಿ, ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಜೊತೆ ಕೃಷಿ, ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top