ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ 2024-25ನೇ ಸಾಲಿಗೆ 6 ನೇ ತರಗತಿ ಪ್ರವೇಶಾತಿ ಪರೀಕ್ಷೆಗೆ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 2012ರ ಮೇ ರಿಂದ 2014ರ ಜುಲೈ ಮಾಹೆಯೊಳಗೆ ಜನಿಸಿದವರಾಗಿರಬೇಕು. ಜಿಲ್ಲೆಯ ಸರ್ಕಾರಿ ಶಾಲೆ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 3 ಮತ್ತು 4 ನೇ ತರಗತಿಯನ್ನು ಪೂರ್ಣಗೊಳಿಸಿ, ಪ್ರಸಕ್ತ ಸಾಲಿನಲ್ಲಿ 5 ನೇ ತರಗತಿ ಅದ್ಯಯನ ಮಾಡುತ್ತಿರಬೇಕು. ಅರ್ಹ ವಿದ್ಯಾರ್ಥಿಗಳು ಆಗಸ್ಟ್ 10 ರೊಳಗಾಗಿ ವಿದ್ಯಾಲಯದ ಅಧಿಕೃತ ವೆಬ್‍ಸೈಟ್ https://navodaya.gov.in ನಿಂದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.
ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಮಾಹಿತಿಯನ್ನು ತಿದ್ದುವ ಅವಕಾಶ ಇರುವುದಿಲ್ಲ.2024 ಜನವರಿ 20 ಪ್ರವೇಶ ಪರೀಕ್ಷಾ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರ್.ಜಿ ಬಡಿಗೇರ್-6363998301, ರವೀಂದ್ರ. ಡಿ.ಕೆ-9741194198, ಎಂ.ವೈ ಕುರುಗುಂದ (ಚನ್ನಗಿರಿ)-9483738275, ತಿಪ್ಪೇಸ್ವಾಮಿ(ದಾವಣಗೆರೆ ಉತ್ತರ)- 7892307035, ಸೌರಭ(ದಾವಣಗೆರೆ ದಕ್ಷಿಣ)- 9482731680, ನಾಗೇಶ್(ಹರಿಹರ)- 9449941170, ಹಿರೇಮಠ (ಹೊನ್ನಾಳಿ)- 9448294794, ದತ್ತಾತ್ರೇಯ. ಕೆ(ಜಗಳೂರು)-7483073517 ಸಂಪರ್ಕಿಸಲು ಜವಹರ್ ನವೋದಯ ವಿದ್ಯಾಲಯ, ದೇವರಹಳ್ಳಿ, ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



