ದಾವಣಗೆರೆ: ನಾಳೆ (ಅ.1) ಸಂಜೆ 7.30ಕ್ಕೆ ನಗರದ ಎಂ.ಸಿ.ಸಿ. ‘ಬಿ’ ಬ್ಲಾಕ್, ಈಜುಕೊಳದ ಹಿಂಭಾಗದಲ್ಲಿರುವ ಐಎಂಎ ಹಾಲ್ ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಿದ್ಧಿ ಸಿದ್ಧಿ ಫೌಂಡೇಶನ್ ಆಶ್ರಯದಲ್ಲಿ 15 ನೇ ವರ್ಷದ ನವರಾತ್ರಿ ದಸರಾ ಹಬ್ಬದ ಪ್ರಯುಕ್ತ ಭಾರತೀಯ ಸಂಪ್ರದಾಯದಂತೆ ‘ ದಾಂಡಿಯಾ ರಾಸ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೈಗಾರಿಕೋದ್ಯಮಿ ಅಥಣಿ ವೀರಣ್ಣ, ಹೊಟೇಲ್ ಉದ್ಯಮಿ ಅಣಬೇರು ರಾಜಣ್ಣ, ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್. ಕೆ. ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ ಮಂಜುನಾಥ, ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್, ಯುವ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಹರಪನಹಳ್ಳಿಯ ಉದ್ಯಮಿ ಉತ್ತಮಚಂದ ಜೈನ, ರಿದ್ಧಿ ಸಿದ್ಧಿ ಫೌಂಡೇಶನ್ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ರಾಜು ಭಂಡಾರಿ, ಯುವ ಮುಖಂಡ ಶ್ರೀಕಾಂತ್ ಬಗರೆ ಮತ್ತಿತರರು ಭಾಗವಹಿಸಲಿದ್ದಾರೆ.



