ದಾವಣಗೆರೆ: ದೇವಸ್ಥಾನ ಜಮೀನು ವಿಚಾರವಾಗಿ ಗಾಂಧಿನಗರ ಠಾಣೆ ವ್ಯಾಪ್ತಿಯ ಚೌಡೇಶ್ವರಿ ನಗರದಲ್ಲಿ ಯುವಕನನ್ನು ಹೊಂಚು ಹಾಕಿ ಕುಳಿತು ನಡು ರಸ್ತೆಯಲ್ಲಿಯೇ ಭೀಕರ ಕೊಲೆ ಮಾಡಿದ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನ ಕಿತ್ತೂರು ಗ್ರಾಮದ ನಿವಾಸಿ ಮೈಲಾರಿ (28) ಕೊಲೆಯಾದ ವ್ಯಕ್ತಿ. ಕಿತ್ತೂರು ಗ್ರಾಮದಲ್ಲಿ 5 ಎಕರೆ ದೇವಸ್ಥಾನದ ಜಮೀನು, ಕಣದ ವಿಚಾರವಾಗಿ ಗ್ರಾಮದ ಶಿವಮೂರ್ತೆಪ್ಪ, ಅವರ ಮಕ್ಕಳಾದ ಕಿರಣ, ಮಲ್ಲೇಶ ಎಂಬುವರು ಸೇರಿಕೊಂಡು ಕೊಲೆ ಮಾಡಿದ್ದರು. ಮೈಲಾರಲಿಂಗೇಶ್ವರ ದೇವರಿಗೆ ಸೇರಿದ ಜಮೀನಿನಲ್ಲಿ ನಮ್ಮ ಪಾಲು ಇದೇ ಎಂದು ಇತ್ತೀಚೆಗೆ ಜಾತ್ರೆ ವೇಳೆ ಗಲಾಟೆ ಮಾಡಿದ್ದರು.
ಆರೋಪಿಗಳು ಹಲವು ದಿನದಿಂದ ಕಾಯುತ್ತಿದ್ದರು. ಕಳೆದ ಭಾನುವಾರ ಸಂಜೆ ಚೌಡೇಶ್ವರಿ ನಗರಕ್ಕೆ ಬರುತ್ತಿದ್ದಂತೆಯೇ ಹೊಂಚು ಹಾಕಿ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ಮೈಲಾರಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಡ ಬಿ ಬಸರಗಿ ಮತ್ತು ದಾವಣಗೆರೆ ನಗರ ಉಪ-ವಿಭಾಗದ
ಪೊಲೀಸ್ ಉಪಾಧೀಕ್ಷಕ ಮಲ್ಲೇಶ್. ಡಿ ಮಾರ್ಗದರ್ಶನದಲ್ಲಿ ಆಜಾದ್ ನಗರ ವೃತ್ತದ ರಾಜಶೇಖರ್.ಎಲ್, ಗಾಂಧಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಕೃಷ್ಣಪ್ಪ ಮತ್ತು ಸಿಬ್ಬಂದಿಯವರಾದ ನಿಜಲಿಂಗಪ್ಪ,ಬದ್ಯಾಮೇಶ್, ಅಸ್ಟರ್ ಅಲಿ, ಶಫಿವುಲ್ಲಾ ಸಿದ್ದಾಕಲಿ, ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಶಾಂತರಾಜು ರವರು ಮತ್ತು ಜೀಪ್ ಚಾಲಕ ನಾಗರಾಜ ತಂಡ ಕಿತ್ತೂರು ಗ್ರಾಮದ 1ನೇ ಆರೋಪಿ ಮಲ್ಲೇಶ್ @ ಮಲ್ಲ, (20) ವರ್ಷ, ಕ 02ನೇ ಆರೋಪಿತ ಶಿವಮೂರ್ತಪ್ಪ, (45) ಬಂಧಿಸಲಾಗಿದೆ.
ಆರೋಪಿಗಳ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲಿಸ್ ಅಧಿಕಾರಿ ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ ಬಸರಗಿ ಪ್ರಶಂಸಿದ್ದಾರೆ.



