ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರೇ ಇಲ್ಲಿವರೆಗೆ ಆಶೀರ್ವಾದ ಮಾಡಿದ್ದು, ಮುಂದೆಯೂ ನನಗೆ ಆಶೀರ್ವಾದ ಮಾಡ್ತಾರೆ; ಸಂಸದ ಸಿದ್ದೇಶ್ವರ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರು ನನ್ನ ಸೋಲು ನೋಡಬೇಕೆಂದು ಹೇಳಿರುವುದೇ ನನಗೆ ಆಶೀರ್ವಾದ. 2019ರವರೆಗೂ ನನಗೆ ಆಶೀರ್ವಾದ ಮಾಡಿದ್ದಾರೆ. ಮುಂದೆಯೂ ಅವರ ಆಶೀರ್ವಾದ ನನ್ನ ಮೇಲೆ ಇರಲಿದೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದ್ದಾರೆ.

ಜಿಎಂಐಟಿ ಕಾಲೇಜಿನ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಹಿರಿಯರು ಅವರ ಬಗ್ಗೆ ಬಹಳ ಗೌರವವಿದೆ. 2004ರಿಂದ ನಾನು ಸೋಲುವುದು ನೋಡಿಕೊಂಡು ಬರುತ್ತಿದ್ದಾರೆ. ಮುಂದೆಯೂ ಸೋಲುವುದು ನೋಡುತ್ತಾರೆ ಎಂದರು

ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ‌ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಾಗೂ ನಮ್ಮ‌ ಪಕ್ಷ ಟಿಕೆಟ್ ವಿಳಂಬ ಹಂಚಿಕೆ ಮುಖ್ಯ ಕಾರಣ. ಇದರಿಂದ ನಮಗೆ ಹಿನ್ನೆಡೆಯಾಗಿದೆ. ನಾವು ಒಮ್ಮತದಿಂದ ಕೆಲಸ ಮಾಡಿದ್ದೇವೆ.‌ ಪ್ರಚಾರಕ್ಕೆ ಎಲ್ಲಾ ಕಡೆ ತೆರಳಿದ್ದೇನೆ. ಮೊದಲಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ನ ಆರು ಶಾಸಕರಿದ್ದಾರೆ. 2013ರಲ್ಲಿ ಬಿಜೆಪಿ ಸರ್ಕಾರ ಇರಲಿಲ್ಲ. ತಾ.ಪಂ ಜಿ.ಪಂ ಹಾಗೂ ಪಾಲಿಕೆ ಸದಸ್ಯರು ಸಹ ಇರಲಿಲ್ಲ, ಅಂತಹ ಸಮಯದಲ್ಲಿ 12 ಸಾವಿರ ಮತದ ಅಂತರದಿಂದ ಗೆದ್ದಿದ್ದೇನೆ. ಮೋದಿ ಹವಾದಿಂದ ಗೆದ್ದಿದ್ದೇನೆ ಎನ್ನುತ್ತಾರೆ. ನಮ್ಮ ತಂದೆಯವರಿದ್ದಾಗ ಯಾವ ಹವಾ ಇತ್ತು ಎಂದು ಎಸ್ ಎಸ್ ಅವರನ್ನೇ ಕೇಳಿ. ಅವರು ಈ ಚುನಾವಣೆಯಲ್ಲಿ‌ ಅವರು ಯಾವ ಹವಾದಿಂದ ಗೆದ್ದಿದ್ದಾರೆ ಎಂದು ಪ್ರಶ್ನಿಸಿದರು.

ಸೋತಾಗಾ ಎಲ್ಲರೂ ಕಲ್ಲು ಹೊಡೆಯುವುದು ಸಹಜ. ಸೋಲು ಗೆಲುವು ಸಹಜ ಮುಂದೆ ಮತ್ತೆ ಗೆಲುವು ಸಾಧಿಸಲಿದ್ದೇವೆ.ವಿದ್ಯುತ್ ಹೊರೆ ಜನತೆಯ ಮೇಲೆ ಆಗುತ್ತಿದೆ.ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ನವರು ಡಬಲ್ ಗೇಮ್ ಮಾಡುತ್ತಿದ್ದಾರೆ. ಐದು ಗ್ಯಾರಂಟಿ ಪೂರೈಕೆ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿಲ್ಲ. ಅವರು ರಾಜ್ಯದಲ್ಲಿ ಮತ್ತೆ ಪ್ರಚಾರ ಆರಂಭಿಸಲಿದ್ದಾರೆ.ಸ್ಮಾರ್ಟ್ ಸಿಟಿ ಯೋಜನೆ ಕಳಪೆ ಕಾಮಗಾರಿಯಾಗಿದ್ದರೆ ತನಿಖೆ ಮಾಡಿಸಲಿ ಎಂದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *