ದಾವಣಗೆರೆ: ಗೃಹಜ್ಯೋತಿ ಹೆಸರಲ್ಲಿ ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ, ಲೋಡ್‌ಶೆಡ್ಡಿಂಗ್ ಹೇರುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಆರು ತಾಸು ವಿದ್ಯುತ್ ನೀಡಬೇಕಿದ್ದರೂ ಮೂರು ತಾಸು ಮಾತ್ರ ಪೂರೈಸಲಾಗುತ್ತಿದೆ. ತಟ್ಟೆಯಲ್ಲಿ ಶಬ್ಧ ಮಾಡುವ ನಾಣ್ಯಗಳನ್ನು ಹಾಕಿ ಅವರಿಗೆ ಗೊತ್ತಾಗದಂತೆ ನೋಟನ್ನು ಎತ್ತಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಕಿಡಿಕಾರಿದರು
ಸಂಸದರ ಜನಸಂಪರ್ಕ ಕಚೇರಿಯಲ್ಲಿ ಮಾತನಾಡಿದ ಅವರು,ಮಹಿಳೆಯರ ಪ್ರಯಾಣಕ್ಕೆ ಅವಕಾಶ ನೀಡುವ ಧಾವಂತದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತೊಂದರೆ ಆಗುತ್ತಿದೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಗಮನಹರಿಸಬೇಕು ಎಂದು ಸೂಚನೆ ನೀಡಿದರು.ಕೋಲ್ಕುಂಟೆ ಹಾಗೂ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೆಎಸ್ ಆರ್ ಟಿಸಿ ಬಸ್‌ಗಳಲ್ಲಿ ಸಂಚಾರಕ್ಕೆ ವ್ಯತ್ಯಯ ಬಗ್ಗೆ ಮನವಿ ಸಲ್ಲಿಸಿದರು.
ಸರ್ಕಾರ ಎಷ್ಟಾದರೂ ಉಚಿತ ಭಾಗ್ಯ ನೀಡಲಿ, ಆದರೆ, ಉಚಿತವಾಗಿ ನೀಡುವ ಭರದಲ್ಲಿ ಇತರೆಯವರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದರು. ಸಂದರ್ಭದಲ್ಲಿ ಮುಖಂಡ ಲೋಕಿಕೆರೆ ನಾಗರಾಜ್, ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್, ಕೂಲಂಬಿ ಬಸವರಾಜ್, ಕೋಲ್ಕುಂಟೆ ಅಣ್ಣಪ್ಪ, ಬಸವರಾಜ್ ಹಾಗೂ ಇತರರಿದ್ದರು.



