ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್ ಎಸ್. ಟಿ. ವೀರೇಶ್ ಅವರು ಇಂದು ನಗರದ ಹಲವೆಡೆ ರೌಂಡ್ಸ್ ಹಾಕಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಚೌಕಿಪೇಟೆ ಪೇಟೆಯಲ್ಲಿ ಬೋರವಲ್ ಸಮಸ್ಯೆ ಬಗ್ಗೆ ವ್ಯಾಪರಸ್ಥರು ದೂರಿದರು. ಕೂಡಲೇ ಬೋರ್ ವೆಲ್ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಎಂ.ಜಿ.ರೋಡ್ ನಲ್ಲಿ ಎಲ್ಲೆಂದರಲ್ಲಿ ಕಸ ಹಾಕದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಲ್ . ಡಿ. ಗೋಣೇಪ್ಪ, ಪಾಲಿಕೆ ಸದಸ್ಯ ಆರ್ ಎಲ್.ಶಿವಪ್ರಕಾಶ್, ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಆರೋಗ್ಯ ಅಧಿಕಾರಿ ಸಂತೋಷ, ಸುದೀರ್, ಸಿನೀಯರ್ ಹೆಲ್ತ್ ಇನ್ಸ್ಪೆಕ್ಟರ್ ಪ್ರಕಾಶ್, ಸ್ಮಾರ್ಟ್ ಇಂಜಿನಿಯರ್ ಪ್ರೀತಂ, ಅಧಿಕಾರಿಗಳು ಉಪಸ್ಥಿತರಿದ್ದರು.