ದಾವಣಗೆರೆ: ಮರಳಿ ಮನಸಾಗಿದೆ ಚಿತ್ರದ ಶೂಟಿಂಗ್ ಮುಹೂರ್ತ ಕಾರ್ಯಕ್ರಮವನ್ನು ಆವರಗೊಳ್ಳದ ವೀರಭದ್ರೇಶ್ಚರ ಸ್ವಾಮಿದ ಆವರಣದಲ್ಲಿ ನಡೆಸಲಾಯಿತು. ಸಂಸದ ಜಿ ಎಂ ಸಿದ್ದೇಶ್ವರ ಕ್ಲಾಪಿಂಗ್ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ನಾಯಕ ಮನೋಜ್ ಚಿತ್ರದ ನಾಯಕಿ ನಿರೀಕ್ಷಾ,ನಿರ್ದೇಶಕ , ಪ್ರೊಡ್ಯೂಸರ್ ಸೇರಿದಂತೆ ಇಡೀ ಚಿತ್ರತಂಡ ಮುಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆನಕ ಟಾಕೀಸ್ ಬ್ಯಾನರ್ ನಡಿಯಲ್ಲಿ ದಾವಣಗೆರೆ ಮೂಲದ ನವೀನ್ ಕುಮಾರ್, ಬೀರೇಶ್, ಮಲ್ಲಿಕಾರ್ಜುನ ಸೇರಿ ಚಿತ್ರ ನಿರ್ಮಿಸುತ್ತಿದ್ದಾರೆ. ಉತ್ತಮ ಚಿತ್ರಕತೆಯನ್ನೊಳಗೊಂಡಿರುವ ಚಿತ್ರದಲ್ಲಿ ಆರು ಸಾಂಗ್ ಗಳನ್ನು ಹೊಂದಿದೆ.
ಮಂಗಳೂರು ಹಾಸನ ಚಿಕ್ಕಮಗಳೂರು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶೂಟಿಂಗ್ ನಡೆಯಲಿದೆ. ಮಳೆಗಾಲದಲ್ಲಿ ಯಾರು ನೋಡಿರದ ಪ್ರಕೃತಿ ಸೊಬಗನ್ನು ಸಿನಿಪ್ರಿಯರಿಗೆ ತೋರಿಸುವ ಉದ್ದೇಶದಿಂದ ಚಿತ್ರ ನಿರ್ಮಾಣವಾಗುತ್ತಿದ್ದು ಚಿತ್ರ ಉತ್ತಮವಾಗಿ ಮೂಡಿ ಬರುವ ವಿಶ್ವಾಸ ಚಿತ್ರತಂಡಕ್ಕಿದೆ. ನಾಯಕ ಮನೋಜ್ ಗೆ ಇದು ಎಂಟನೇ ಸಿನಿಮಾವಾಗಿದ್ದು ನಾಯಕ ನಿರೀಕ್ಷಾಗೆ ಇದು ಎರಡನೇ ಕನ್ನಡ ಸಿನಿಮಾವಾಗಿದ್ದು ತುಳು ಮಲೆಯಾಳಿಯಲ್ಲಿ ತೆಲಗು ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಇದ್ದು ಕನ್ನಡಕ್ಕೆ ಹೊಸ ತಾರೆಗಳಾಗಿದ್ದಾರೆ. ಇವರ ಜೊತೆ ಅನುಭವಿ ಸಹಕಲಾವಿದರ ದೊಡ್ಡ ತಾರಾಬಳಗ ಚಿತ್ರತಂಡದಲ್ಲಿದೆ.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಸಹನಾರವಿ ಹಾಗು ನವೀನ್ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಉತ್ತಮ ನಟ ನಟಿ ನಿರ್ಮಾಪಕ ನಿರ್ದೆಶಕರನ್ನು ಚಿತ್ರತಂಡ ಒಳಗೊಂಡಿದೆ. ನಾಡಿನಾದ್ಯಂತ ಚೆನ್ನಾಗಿ ನಿರ್ಮಾಣವಾಗಿ ನೂರು ದಿನ ಪ್ರದರ್ಶನ ಕಾಣಲಿ ಎಂದು ಜಿ ಎಂ ಸಿದ್ದೇಶ್ವರ್ ಹಾರೈಸಿದರು.