ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್:  12.49 ಕೋಟಿ ಉಳಿತಾಯ ಬಜೆಟ್  ಮಂಡಿಸಿದ ಮೇಯರ್ ಎಸ್.ಟಿ. ವೀರೇಶ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: 2021ನೇ ಸಾಲಿನ ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ ಅನ್ನು ಮೇಯರ್ ಎಸ್.ಟಿ. ವೀರೇಶ್  ಅವರು ಮಂಡಿಸಿದ್ದು. ಒಟ್ಟು 12.49 ಕೋಟಿ ಉಳಿತಾಯ ಬಜೆಟ್ ಮಂಡಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ 2021-22ನೇ ಸಾಲಿನಲ್ಲಿ ಆಯವ್ಯಯ ಮಂಡಿಸಲಾಯಿತು.  ಪಾಲಿಕೆಗೆ ಒಟ್ಟು 43329.35 ಲಕ್ಷ ವಿವಿಧ ಮೂಲಗಳಿಂದ ಆದಾಯ ಸಂಗ್ರಹವಾಗಲಿದೆ.  ಇದರಲ್ಲಿ ಒಟ್ಟು 42079.75 ಲಕ್ಷ ವಿವಿಧ ಕಾರ್ಯಗಳಿಗೆ  ಖರ್ಚಾಗಲಿದೆ.   ಆದಾಯದಲ್ಲಿ ಖರ್ಚು ತೆಗೆದು, ಇನ್ನು 1249.60 ಲಕ್ಷ ಉಳಿತಾಯ  ಬಜೆಟ್ ಮಂಡಿಸಲು ಹರ್ಷಿಸುತ್ತೇನೆ ಎಂದು ಮೇಯರ್ ಎಸ್. ಟಿ. ವೀರೇಶ್ ಎಂದು ಹೇಳಿದರು.

  • 2021 ಬಜೆಟ್ ವಿವರ
  • ಸ್ವೀಕೃತಿಗಳು
  • ಆರಂಭಿಕ ಶಿಲ್ಕು -8414.50 ಲಕ್ಷ
  • ರಾಜಸ್ವ ಸ್ವೀಕೃತಿ-127140.85 ಲಕ್ಷ
  • ಬಂಡವಾಳ ಸ್ವೀಕೃತಿಗಳು-9970.00 ಲಕ್ಷ
  • ಅಸಾಮಾನ್ಯ ಸ್ವೀಕೃತಿಗಳು-12234.00 ಲಕ್ಷ
  • ಒಟ್ಟು ಸ್ವೀಕೃತಿ-43329.35 ಲಕ್ಷ
  • ಪಾವತಿಗಳು
  • ರಾಜಸ್ವ ಪಾವತಿ-11431.25
  • ಬಂಡವಳ ಪಾವತ-14643.00
  • ಅಸಾಮಾನ್ಯ ಪಾವತಿ-16005.50
  • ಒಟ್ಟು ಪಾವತಿ 42079.75 ಲಕ್ಷ
  • ಉಳಿತಾಯ 1249.60 ಲಕ್ಷ

ಬಜೆಟ್ ಗೆ ಪಕ್ಷತೀತವಾಗಿ ಎಲ್ಲ ಸದಸ್ಯರು, ನಾಗರಿಕರ, ಸಂಘ ಸಂಸ್ಥೆಗಳು ಪೂರ್ವಭಾವಿ ಸಭೆಯಲ್ಲಿ ಸಲಹೆ,  ಸೂಚನೆಗಳನ್ನು ನೀಡಿದ್ದರು,  ಜೊತೆಗೆ ನನ್ನದೇ ಆದ ಕನಸುಗಳನ್ನು ನನಸು ಮಾಡಲು ಈ ಬಜೆಟ್ ನಲ್ಲಿ  ಶ್ರಮಿಸಿದ್ದೇನೆ. ಕೊರೊನಾ ಸಂದರ್ಭದಲ್ಲಿ ಇರುವ ಇತಿ ಮಿತಿಯಲ್ಲಿ  ಸಾಧ್ಯವಾದಷ್ಟು ಉತ್ತಮ ಬಜೆಟ್ ಮಂಡಿಸಿದ್ದೇನೆ. ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಿಸಿದ ಹಲವು ಕಾರ್ಯರೂಪಕ್ಕೆ ತಂದು ಅನುಷ್ಠಾನಗೊಳಿಸಲಾಗಿದೆ ಎಂದರು.

mayor st veeresh

ವ್ಯಾಪಾರ ಪರವಾನಿಗೆ, ಕಟ್ಟಡ ಪರವಾನಿಗೆ  ಸಂಪೂರರ್ಣವಾಗಿ ಗಣಕೀಕರಣಗೊಂಡಿದೆ. ಇರುವ ಸಣ್ಣ ಪುಟ್ಟ ಸಮಸ್ಯೆಯನ್ನುಸರಿಪಡಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡಲಿದ್ದೇವೆ. ಸ್ವಮಾರ್ಟ್ ಸಿಟಿ ಯೋಜನೆಯ ಕೆ.ಆರ್. ಮಾರುಕಟ್ಟೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಅದರಲ್ಲಿ ಹೆಚ್ಚಿನ ಆದಾಯ ಕ್ರೋಢಿಕರಣ ನಿರೀಕ್ಷೆ ಹೊಂದಲಾಗಿದೆ. ಇನ್ನು ಸಾರ್ವಜನಿಕರು ಆಸ್ತಿ ತೆರಿಗೆ, ನೀರಿನ ಕಂದಾಯ, ಮಳಿಗೆ ಬಾಡಿಗೆಯನ್ನು ಸಕಾಲದಲ್ಲಿ ಪಾವತಿಸಿ ನಗರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ವಿಪಕ್ಷ ನಾಯಕ ಎ. ನಾಗರಾಜ ಮಾತನಾಡಿ, ಕಳೆದ ಬಾರಿಯ ಬಜೆಟ್ ನಲ್ಲಿ ಸ್ಕೈವಾಕ್, ಪಾರ್ಕ್ ಗಳ ಅಭಿವೃದ್ಧಿ, ಹಸಿರುಕರಣ, ಬೀದಿ ದೀಪಗಳ ಅಳವಡಿಕೆ, ಡಿಜಿಟಲ್ ಗ್ರಂಥಾಲಯ, ಫುಡ್ ಪಾರ್ಕ್  ಸೇರಿದಂತೆ 26 ಯೋಜನೆ ಗಳನ್ನು ಗೋಷಿಸಿದ್ದೀರಿ. ಆದರೆ, ಇದಲ್ಲಿ ಕಾರ್ಯರೂಪಕ್ಕೆ ಬಂದಿರುವುದು  ಐದಾರು ಯೋಜನೆ ಮಾತ್ರ. ಈ ಬಾರಿ ಮತ್ತೆ 39 ಯೋಜನೆ ಘೋಷಿಸಿದ್ದೀರಿ.  ಹಿಂದಿನ ಯೋಜನೆಗಳನ್ನೇ ಪೂರ್ಣಗೊಳಿಸಿಲ್ಲ. ಈ ವರ್ಷದ ಯೋಜನೆ ಯಾವಾಗ ಪೂರ್ಣಗೊಳಿಸುತ್ತೀರಿ ಎಂದರು.

ನಗರದಲ್ಲಿ ಜಲಸಿರಿ ಯೋಜನೆ, ಸ್ಮಾರ್ಟ್ ಸಿಟಿ ವರ್ಕ್ ನಡೆಯುತ್ತಿದೆ. ಆದರೆ, ಪಾಲಿಕೆ ವತಿಯಿಂದ ಎಷ್ಟು ವರ್ಕ್ ಮಾಡಿದ್ದೀರಿ. ಎಷ್ಟು ವರ್ಕ್ ಗಳಿಗೆ ವರ್ಕ್ ಆರ್ಡರ್ ಕೊಟ್ಟಿದ್ದೀರಿ  ಎಂಬುದನ್ನು ತಿಳಿಸಿಬೇಕು ಎಂದರು. ಇನ್ನು ಇಡೀ ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಆದರೆ, ಈ ಬಾರಿಯ ಪಾಲಿಕೆ ಬಜೆಟ್ ನಲ್ಲಿ ಯಾವುದೇ ಯೋಜನೆ ಪ್ರಸ್ತಾಪ ಮಾಡಿಲ್ಲ. ನಗರದಲ್ಲಿ ಕಸ ವಿಲೇವಾರಿ ವೇಳೆ ಒಣ ಕಸ, ಹಸಿ ಕಸ ವಿಂಗಡನೆ ಮಾಡಿ ಎಂದು ಹೇಳುತ್ತಾರೆ. ಆದರೆ, ಪಾಲಿಕೆ ವತಿಯಿಂದ ಇದಕ್ಕೆ ಪ್ರತ್ಯೇಕವಾಗಿ ಬಾಕ್ಸ್ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *