Connect with us

Dvg Suddi-Kannada News

ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್: ಯಾವ ಯೋಜನೆಗೆ ಎಷ್ಟು ಹಣ ಮೀಸಲಿಡಲಾಗಿದೆ ಗೊತ್ತಾ ..?

ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್: ಯಾವ ಯೋಜನೆಗೆ ಎಷ್ಟು ಹಣ ಮೀಸಲಿಡಲಾಗಿದೆ ಗೊತ್ತಾ ..?

ದಾವಣಗೆರೆ: 2021ನೇ ಸಾಲಿನ ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ ಅನ್ನು ಮೇಯರ್ ಎಸ್.ಟಿ. ವೀರೇಶ್  ಅವರು ಮಂಡಿಸಿದ್ದು. ಒಟ್ಟು 12.49 ಕೋಟಿ ಉಳಿತಾಯ ಬಜೆಟ್ ಮಂಡಿಸಿದ್ದಾರೆ.ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ 2021-22ನೇ ಸಾಲಿನಲ್ಲಿ ಆಯವ್ಯಯ ಮಂಡಿಸಲಾಯಿತು.  ಪಾಲಿಕೆಗೆ ಒಟ್ಟು 43329.35 ಲಕ್ಷ ವಿವಿಧ ಮೂಲಗಳಿಂದ ಆದಾಯ ಸಂಗ್ರಹವಾಗಲಿದೆ.  ಇದರಲ್ಲಿ ಒಟ್ಟು 42079.75 ಲಕ್ಷ ವಿವಿಧ ಕಾರ್ಯಗಳಿಗೆ  ಖರ್ಚಾಗಲಿದೆ.   ಆದಾಯದಲ್ಲಿ ಖರ್ಚು ತೆಗೆದು, ಇನ್ನು 1249.60 ಲಕ್ಷ ಉಳಿತಾಯ  ಬಜೆಟ್ ಮಂಡಿಸಿದರು. ಒಟ್ಟು 39 ಯೋಜನೆ ಘೋಷಿಸಿದರು. ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್:  12.49 ಕೋಟಿ ಉಳಿತಾಯ ಬಜೆಟ್  ಮಂಡಿಸಿದ ಮೇಯರ್ ಎಸ್.ಟಿ. ವೀರೇಶ್

 • ಯಾವ ಯೋಜನೆಗೆ ಎಷ್ಟು ಹಣ ಮೀಸಲು..?
 • ಬಸಾಪುರ, ಕರೂರು,ಎಸ್ಓಜಿ ಕಾಲೋನಿ ಹಾಗೂ ಬಸವನಗೌಡ ಕಾಲೋನಿಯ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ  ನಿರ್ಮಾಣಕ್ಕೆ 2 ಕೋಟಿ
 • ದಾವಣಗೆರೆ ದಕ್ಷಿಣ,  ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ಮಾದರಿ ವಿದ್ಯಾನವನ ನಿರ್ಮಾಣಕ್ಕೆ 100 ಲಕ್ಷ
 • ಸುಸಜ್ಜಿತವಾದ ಮಾದರಿ ರಸ್ತೆ ನಿರ್ಮಾಣಕ್ಕೆ 2ಕೋಟಿ
 • ಸಂತೆ, ಮಾರುಕಟ್ಟೆ 25 ಲಕ್ಷದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ
 • ಮಹಾನಗರ ಪಾಲಿಕೆ ನವೀಕರಣಕ್ಕೆ 1 ಕೋಟಿ
 • ಮಹಿಳೆಯರಿಗೆ ಪ್ರತ್ಯೇಕವಾದ ಒಳಾಂಗಣ ಕ್ರೀಡಾಂಣ ನಿರ್ಮಾಣಕ್ಕೆ 25 ಲಕ್ಷ ಅನುದಾನ
 • ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್  ತರಬೇತಿ ಕೇಂದ್ರಕ್ಕೆ 20 ಲಕ್ಷ
 • ಡಿಸಿಎಂ ಟೌನ್ ಶಿಫ್ ಅನಿಲ್ ಕುಂಬ್ಳೆ  ಸರ್ಕಲ್ ನಲ್ಲಿ ಒಳಾಂಗಣ ಸ್ಟೇಡಿಯಂ ನಿರ್ಮಾಣಕ್ಕೆ 1 ಕೋಟಿ
 • ಅನಗತ್ಯವಾಗಿರುವ ರಸ್ತೆ ಉಬ್ಬು ತೆರವುಗೊಳಿಸುವುದು ಮತ್ತು ರಸ್ತೆ ಗೊಂಡಿ ಮುಚ್ಚುವುದಕ್ಕೆ 50 ಲಕ್ಷ
 • 5000 ಬೀಡಾಡಿ ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲು 20 ಲಕ್ಷ
 • ಬೀಡಾಡಿ ವರಾಹಗಳಿಗೆ ವರಾಹಶಾಲೆ ನಿರ್ಮಾಣಕ್ಕೆ 35 ಲಕ್ಷ
 • ನಗರ ಅರಣ್ಯೀಕರಣ ಹಾಗೂ ವನ ಮಹೋತ್ಸವ ಆಚರಿಸುವ ಉದ್ದೇಶಕ್ಕಾಗಿ 50 ಲಕ್ಷ
 •  ಪತ್ರಕರ್ತರು ಹಾಗೂ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ 10 ಲಕ್ಷ
 • ಪಾಲಿಕೆ ಒಡೆತನದ ನಿಟ್ಟುವಳ್ಳಿ ಸಮುದಾಯ ಭವನದ ಮುಂದುವರೆದ ಕಾಮಗಾರಿ ನಿರ್ವಹಿಸಲು 25 ಲಕ್ಷ
 •  ವಾರ್ಡ್ ನಂ. 35ರ ಕೊರಚರಹಟ್ಟಿಯಲ್ಲಿ ಅಪೂರ್ಣಗೊಂಡ ಸಮುದಾಯ ಭವನವನ್ನು ಪೂರ್ಣಗೊಳಿಸಲು 5 ಲಕ್ಷ
 • ಇಂಗು ಗುಂಡಿಗಳ ನಿರ್ಮಾಣಕ್ಕೆ 60 ಲಕ್ಷ
 • ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನಗರದ ಕ್ರೀಡಾಪಟುಗಳಿಗೆ ಪ್ರವಾಸ ಭತ್ಯೆ, ತಂಗುವಿಕೆ ಭತ್ಯೆ, ಪ್ರೋತ್ಸಾಹಧನ  ನೀಡಲು 10 ಲಕ್ಷ
 • ನಗರದ ಸ್ವಚ್ಛತೆ  ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು 20 ಲಕ್ಷ ರೂ
 •  ವೃದ್ಧಾಶ್ರಮಗಳಿಗೆ ಪರಿಕರ ವ್ಯವಸ್ಥೆಯನ್ನು ಸರ್ಕಾರದ ಅನುಮೋದನೆಯೊಂದಿಗೆ ಕಲ್ಪಿಸುವ ಉದ್ದೇಶಕ್ಕಾಗಿ 10 ಲಕ್ಷ
 • ನಗರದ ಸ್ವಚ್ಛತೆಯನ್ನು ಗಮನದಲ್ಲಿರಿಸಿಕೊಂಡು ಒಂದು ಬಡಾವಣೆಯನ್ನು ಮಾದರಿ ಬಡಾವಣೆಯಾಗಿ ಅಭಿವೃದ್ಧಿಪಡಿಸಲು 2 ಕೋಟಿ
 •  ಪಾಲಿಕೆಯ ಖಾಯಂ ಅಧಿಕಾರಿ ಅಥವಾ ನೌಕರರ ವಸತಿ ಗೃಹ ನಿರ್ವಹಣೆಗೆ 50 ಲಕ್ಷ
 • ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಪರಿಕರಗಳ ಖರೀದಿಗೆ 10 ಲಕ್ಷ ರೂ. ಡಿಜಿಟಲ್ ನಿರ್ಮಾಣಕ್ಕೆ 50 ಲಕ್ಷ
 • ಪಾಲಿಕೆ ಒಡೆತನದಲ್ಲಿ ಬರುವ ನಿವೇಶನದಲ್ಲಿ ಒಂದು ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಲು 150 ಲಕ್ಷ ರೂ. ಬೀದಿ ದೀಪಗಳ ನಿರ್ವಹಣೆಗೆ 350 ಲಕ್ಷ
 •  ಕೆ.ಹೆಚ್.ಬಿ.ತುಂಗಭದ್ರ ಬಡಾವಣೆ ಅಭಿವೃದ್ಧಿಗೆ 10 ಕೋಟಿ ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅಭಿವೃದ್ಧಿ ಯೋಜನೆ 25 ಲಕ್ಷ  ನೀಡಲು ಅಂದಾಜಿಸಲಾಗಿದೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top