ದಾವಣಗೆರೆ: ಉದ್ಯಾನವನ ಒತ್ತುವರಿ ಮಾಡಿಕೊಂಡು16 ಮನೆಯನ್ನು ವ್ಯಕ್ತಿಯೊಬ್ಬ ನಿರ್ಮಿಸಿದ್ದನು. ಇದನ್ನು ಪತ್ತೆ ಮಾಡಿದ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು (ಡಿ.30) ಪೊಲೀಸ್ ಭದ್ರತೆಯಲ್ಲಿ ತೆರವು ಮಾಡಿದ್ದಾರೆ.
ಬೇಸಿಗೆ ಹಂಗಾಮಿನ ಬೆಳೆಗೆ ನೀರು: ಜ.2ರಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ
ಕೊಂಡಜ್ಜಿ ರಸ್ತೆಯಲ್ಲಿರುವ ವಿಜಯನಗರದಲ್ಲಿ ರಾಮಪ್ಪ ಕುಟುಂಬ ಉದ್ಯಾನ ಜಾಗವನ್ನು ಒತ್ತುವರಿ ಮಾಡಿಕೊಂಡು 16 ಮನೆಗಳನ್ನು ನಿರ್ಮಿಸಿತ್ತು. ಒತ್ತುವರಿ ಖಚಿತವಾದ ಬಳಿಕ ಮನೆಗಳನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆ ಸೂಚಿಸಿತ್ತು. ಪಾಲಿಕೆ ಸೂಚನೆ ನೀಡಿದರೂ ತೆರವು ಮಾಡದಿದ್ದರಿಂದ ಇಂದು ಅಧಿಕಾರಿಗಳೇ ಜೆಸಿಬಿ ಮೂಲಕ ತಡರವು ಕಾರ್ಯಾಚರಣೆ ನಡೆಸಿದ್ದಾರೆ.
ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ವ್ಯಾಸಂಗ ವೇತನ, ಫೆಲೋಶಿಫ್‌ಗೆ ಅರ್ಜಿ ಆಹ್ವಾನ
ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸುವಾಗ ಕುಟುಂಬಗಳು ವಿರೋಧ ವ್ಯಕ್ತಪಡಿಸಿದವು. ಈ ಹಿಂದೆ ಮೂರು ಮನೆಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿ ಉಳಿದ ಮನೆಗಳಿಗೆ ಕಾಲಾವಕಾಶ ನೀಡಿದ್ದರು. ನಿಗದಿತ ಕಾಲಮಿತಿಯಲ್ಲಿ ಮನೆ ತೆರವು ಮಾಡದಕ್ಜೆ ಜೆಸಿಬಿ ಮೂಲಕ ತೆರವು ಮಾಡಲಾಯಿತು.
ದಾವಣಗೆರೆ: ಮತ್ತೆ ಅಡಿಕೆಗೆ ಭರ್ಜರಿ ಬೆಲೆ; ಕೇವಲ 10 ದಿನದಲ್ಲಿ 3 ಸಾವಿರ ಏರಿಕೆ
ನಮ್ಮದೇ ಜಮೀನಿನಲ್ಲಿ 25 ವರ್ಷಗಳ ಹಿಂದೆ ಮನೆ ನಿರ್ಮಿಸಿಕೊಂಡಿದ್ದೇವೆ. ಮನೆಗಳಿಗೆ ವಿದ್ಯುತ್ ಬಿಲ್, ನೀರಿನ ಬಿಲ್ ಸೇರಿದಂತೆ ಎಲ್ಲ ದಾಖಲೆಗಳಿವೆ. ಮನೆ ಕಂದಾಯ ಕೂಡ ಕಟ್ಟಲಾಗಿದೆ. ಆದರೆ, ಈಗ ಸರ್ಕಾರಿ ಜಾಗ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಉದ್ಯಾನ ಒತ್ತುವರಿ ಎಂಬುದಾಗಿ ರಾಮಪ್ಪ ಅಳಲು ತೋಡೊಕೊಂಡಿದ್ದಾರೆ.



