ದಾವಣಗೆರೆ; ಜನವರಿ ಅಂತ್ಯದೊಳಗೆ ನಾಮಫಲಕದಲ್ಲಿ ಶೇ.60 ಕನ್ನಡ ಬಳಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರದ ನಿರ್ದೇಶನ ನೀಡಿದೆ. ಹೀಗಾಗಿ ಅ೦ಗಡಿ,ಹೋಟೆಲ್ , ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ ಬಳಸಲೇಬೇಕು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ ರೇಣುಕಾ ಸೂಚನೆ ನೀಡಿದ್ದಾರೆ.
ಆಟೋಗಳು, ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆಗಳಮೂಲಕ ಈಗಾಗಲೇ ಅಂಗಡಿಗಳು, ಹೊಟೆಲ್, ಲಾಡ್ಜ್ ಸೇರಿ ವಾಣಿಜ್ಯ ಸಂಸ್ಥೆ, ಕಂಪನಿಗಳು, ಮಾಲೀಕರಿಗೆಸೂಚಿಸಲಾಗಿದೆ ಎಂದರು. ಜನವರಿ ಅಂತ್ಯದವರೆಗೆ ಶೇ.60 ಕನ್ನಡ ಭಾಷೆಯ ಫಲಕ ಅಳವಡಿಸಲು ಕಾಲಾವಕಾಶ ನೀಡಲಾಗಿದೆ. ಇದೇ ಮಾಸಾಂತ್ಯದ
ಒಳಗಾಗಿ ನಾಮಫಲಕಗಳ ಶೇ.60-40 ಅನುಪಾತದಲ್ಲಿ ಬದಲಾಯಿಸದಿದ್ದರೆ, ಅಂತಹವರಿಗೆ ದಂಡ ವಿಧಿಸಲಾಗುವುದು. ಈಗಾಗಲೇ ಈ ನಿಯಮ ಪಾಲಿಸದವರಿಗೆ ನೋಟಿಸ್ ನೀಡಲಾಗಿದೆ. ಫೆ.1ರಿಂದಲೇ ದಂಡ ವಿಧಿಸಿ ವಾಣಿಜ್ಯ ಪರವಾನಗಿ (ಟ್ರೇಡ್ ಲೈಸೆನ್ಸ್) ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.



