ದಾವಣಗೆರೆ; ಸ್ವಚ್ಛ ಭಾರತ ಮಿಷನ್ 2.0ರ ಅಡಿಯಲ್ಲಿ ಎರಡು ವರ್ಷಗಳವರೆಗೆ ದಾವಣಗೆರೆ ಮಹಾನಗರ ಪಾಲಿಕೆಯ ಜೊತೆಗೆ ಪೂರ್ಣಾವಧಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಗುಂಪು ಮತ್ತು ಸರ್ಕಾರೇತರ ಸಂಸ್ಥೆಗಳ ಸದಸ್ಯರರಿಂದ ಅರ್ಜಿ ಆಹ್ವಾನಿಸಲಾಗಿದೆ.
ನಲ್ಮ್-ಡೇ ಯೋಜನೆಯೊಂದಿಗೆ ನೊಂದಾಯಿಸಿಕೊಂಡ ಆಸಕ್ತ ಸ್ವಸಹಾಯ ಗುಂಪುಗಳ ಸದಸ್ಯರು ತಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು ನಲ್ಮ್-ಡೇ ಯ ಹಿಂಬರಹದೊಂದಿಗೆ www.davanagerecity.mrc.gov.in ವೆಬ್‍ಸೈಟ್‍ನಲ್ಲಿ ನಿಗಧಿತ ನಮೂನೆಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ನ.10 ರ ಒಳಗಾಗಿ ಮಹಾನಗರ ಪಾಲಿಕೆ ಕಚೇರಿಗೆ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.



