ದಾವಣಗೆರೆ: ನಾಳೆ ದಾವಣಗೆರೆ ಮಹಾನಗರ ಪಾಲಿಕೆಯ ಆಯ-ವ್ಯಯ (ಬಜೆಟ್) ಮಂಡನೆಯಾಗಲಿದೆ. ಬಜೆಟ್ ಸಾಮಾನ್ಯ ಸಭೆಯನ್ನು ಪಾಲಿಕೆಯ ಮೇಯರ್ ಆರ್.ಜಯಮ್ಮ ಅವರ ಅಧ್ಯಕ್ಷತೆಯಲ್ಲಿ ನಾಳೇ (ಮಾ.31) ಬೆಳಿಗ್ಗೆ 11 ಗಂಟೆಗೆ ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪಾಲಿಕೆಯ ಕಾರ್ಯದರ್ಶಿ ತಿಳಿಸಿದ್ದಾರೆ.
2021ನೇ ಸಾಲಿನ ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ ಅನ್ನು ಮೇಯರ್ ಎಸ್.ಟಿ. ವೀರೇಶ್ ಮಂಡಿಸಿದ್ದು, ಒಟ್ಟು 12.49 ಕೋಟಿ ಉಳಿತಾಯ ಬಜೆಟ್ ಮಂಡಿಸಿದ್ದರು. ಪಾಲಿಕೆಗೆ ಒಟ್ಟು 43329.35 ಲಕ್ಷ ವಿವಿಧ ಮೂಲಗಳಿಂದ ಆದಾಯ ಸಂಗ್ರಹ ಗುರಿ ಹೊಂದಲಾಗಿತ್ತು. ಇದರಲ್ಲಿ ಒಟ್ಟು 42079.75 ಲಕ್ಷ ವಿವಿಧ ಕಾರ್ಯಗಳಿಗೆ ಖರ್ಚಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದಾಯದಲ್ಲಿ ಖರ್ಚು ತೆಗೆದು, ಇನ್ನು 1249.60 ಲಕ್ಷ ಉಳಿತಾಯ ಬಜೆಟ್ ಮಂಡಿಸಿದ್ದಾಗಿ ಮೇಯರ್ ಎಸ್. ಟಿ. ವೀರೇಶ್ ಸಭೆಗೆ ತಿಳಿಸಿದ್ದರು.