ದಾವಣಗೆರೆ: 2022-23 ನೇ ಸಾಲಿನ ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ ಅನ್ನು ಮೇಯರ್ ಜಯಮ್ಮ ಗೋಪಿನಾಯ್ಕ ಪರವಾಗಿ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ ಅವರು ಡಿಜಿಟಲ್ ಟ್ಯಾಬ್ ಮೂಲಕ ಮಂಡಿಸಿದ್ದು, ಒಟ್ಟು 21.56 ಕೋಟಿ ಉಳಿತಾಯ ಬಜೆಟ್ ಮಂಡಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ 2022 ನೇ ಸಾಲಿನಲ್ಲಿ ಆಯವ್ಯಯ ಮಂಡಿಸಲಾಯಿತು. ಪಾಲಿಕೆಯ 12266.27 ಲಕ್ಷ ಆರಂಭಿಕ ಶಿಲ್ಕು ಸೇರಿ ವಾಣಿಜ್ಯ ಮಳಿಗೆ, ಕಟ್ಟಡ ಪರವಾನಗಿ ಶುಲ್ಕ, ಅಭಿವೃದ್ಧಿ ಶುಲ್ಕ, ಉದ್ಯಮೆ ಶುಲ್ಕ, ನೀರು ಸರಬರಾಜು ಶುಲ್ಕ, ಯುಜಿಡಿ ಸೇರಿ ವಿವಿಧ ಮೂಲಗಳಿಂದ ಒಟ್ಟು 51211.70 ಲಕ್ಷ ಸ್ವೀಕೃತಿ ಆಗಲಿದ್ದು, ಇದರಲ್ಲಿ ಆಡಳಿತ ನಿರ್ವಹಣೆ, ಮಾನವ ಸಂಪನ್ಮೂಲ, ಹೊರ ಗುತ್ತಿಗೆ, ಇಂಧನ , ವಿದ್ಯುತ್ ವೆಚ್ಚ ಸೇರಿ ಒಟ್ಟು 49056.60 ಲಕ್ಷ ವಿವಿಧ ಕಾರ್ಯಗಳಿಗೆ ಖರ್ಚಾಗಲಿದೆ. ಒಟ್ಟು ಆದಾಯದಲ್ಲಿ ಖರ್ಚು ತೆಗೆದು, ಇನ್ನು 21.56 ಕೋಟಿ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಮೇಯರ್ ಜಯಮ್ಮ ಪರವಾಗಿ ಸೋಗಿ ಶಾಂತಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಉಪಮೇಯರ್ ಗಾಯತ್ರಿ ಖಂಡೋಜಿರಾವ್,ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ನಾಯ್ಕ್, ಉಪಾಯುಕ್ತ ನಳಿನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
- 2022-23 ಬಜೆಟ್ ವಿವರ
- ಆರಂಭಿಕ ಶಿಲ್ಕು -12256.27 ಲಕ್ಷ
- ಸ್ವೀಕೃತಿಗಳು
- ರಾಜಸ್ವ ಸ್ವೀಕೃತಿ-13633.80 ಲಕ್ಷ
- ಬಂಡವಾಳ ಸ್ವೀಕೃತಿಗಳು-8930.36 ಲಕ್ಷ
- ಅಸಾಮಾನ್ಯ ಸ್ವೀಕೃತಿಗಳು-16392.27 ಲಕ್ಷ
- ಒಟ್ಟು ಸ್ವೀಕೃತಿ-51212.70 ಲಕ್ಷ
- ಪಾವತಿಗಳು
- ರಾಜಸ್ವ ಪಾವತಿ-12504.60 ಲಕ್ಷ
- ಬಂಡವಳ ಪಾವತಿ-15566.00 ಲಕ್ಷ
- ಅಸಾಮಾನ್ಯ ಪಾವತಿ-20986.00 ಲಕ್ಷ
- ಒಟ್ಟು ಪಾವತಿ 49056.60 ಲಕ್ಷ
- ಉಳಿತಾಯ 2156.16 ಲಕ್ಷ



