ದಾವಣಗೆರೆ: ಅಮಾನತುಗೊಂಡಿದ್ದ ಗ್ರಂಥಾಲಯದ ಮೇಲ್ವಿಚಾರಕರನ್ನು ಕರ್ತವ್ಯಕ್ಕೆ ಮರು ಸೇರ್ಪಡೆಗೊಳಿಸಲು 50 ಸಾವಿರಕ್ಕೆ ಬೇಡಿಕೆ ಇಟ್ಟು, 40 ಸಾವಿರ ಲಂಚ ಪಡೆಯುವಾಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ (ಟಿಪಿ ಸಿಇಓ) ಅಧಿಕಾರಿಯ ಕಾರು ಚಾಲಕ ಲೋಕಾಯುಕ್ತ ಬಲೆಗೆ (lokayukta raid) ಬಿದಿದ್ದಾನೆ.
ಚನ್ನಗಿರಿ ಟಿಪಿ ಸಿಇಓ ಬಿ.ಕೆ.ಉತ್ತಮ್ ಅವರ ಕಾರು ಚಾಲಕ ಶ್ಯಾಮಕುಮಾರ್ ಬಂಧಿತ ಆರೋಪಿ ಆಗಿದ್ದಾನೆ. 40 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಹಣವನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ. ಈತ ದಿನಗೂಲಿ ಆಧಾರದ ಮೇರೆಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದನು.
ಚನ್ನಗಿರಿ ತಾಲ್ಲೂಕಿನ ಬೆಳ್ಳಿಗನೂಡು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕ ಶಫೀವುಲ್ಲಾ ಕರ್ತವ್ಯಲೋಪದ ಕಾರಣದಿಂದ ಕಳೆದ ಫೆಬ್ರುವರಿ ತಿಂಗಳಲ್ಲಿ ಅಮಾನತುಗೊಂಡಿದ್ದರು. ಕರ್ತವ್ಯಕ್ಕೆ ಮರುನಿಯೋಜಿಸಲು 50,000 ಲಂಚಕ್ಕೆ ಶ್ಯಾಮ್‌ಕುಮಾರ್ ಬೇಡಿಕೆ ಇಟ್ಟಿದ್ದರು. ಈ ಕುರಿತು ಶಫೀವುಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶ್ಯಾಮ್‌ಕುಮಾರ್ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಲಂಚದ 40,000 ರೂ. ಪಡೆಯುವಾಗ ದಾಳಿ ನಡೆದಿದೆ ಎಂದು ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೂರೆ ತಿಳಿಸಿದ್ದಾರೆ.