ದಾವಣಗೆರೆ: ನಿವೇಶನ ಹಕ್ಕುಪತ್ರ ನೀಡಲು 5 ಸಾವಿರ ಲಂಚ ಪಡೆಯುವಾಗ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್, ನೀರುಗಂಟಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮ ಪಂಚಾಯ್ತಿಯ ಹಂಗಾಮಿ ಬಿಲ್ ಕಲೆಕ್ಟರ್ ಲೋಕೇಶ್, ನೀರುಗಂಟಿ ಶೇಖರಪ್ಪ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದವರು. ದೇವರಹಳ್ಳಿ ಗ್ರಾಮ ಲಕ್ಷ್ಮೀದೇವಿ ಎಂಬುವವರಿಗೆ ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆ ಅಡಿಯಲ್ಲಿ 2016ನೇ ಸಾಲಿನಲ್ಲಿ ವಸತಿ ನಿವೇಶನ ಮಂಜೂರಾತಿ ಆಗಿತ್ತು. ಮಂಜೂರಾದ ನೀವೇಶನ ಹಕ್ಕುಪತ್ರ ನೀಡಲು ಹಂಗಾಮಿ ಬಿಲ್ ಕಲೆಕ್ಟರ್ ಲೋಕೇಶ್ ಮಂಜೂ ನಿವೇಶನದ ಹಕ್ಕು ಪತ್ರ ನೀಡಲು 5000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲಕ್ಷ್ಮೀದೇವಿ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಲಕ್ಷ್ಮೀದೇವಿಯಿಂದ ಗ್ರಾಮ ಪಂಚಾಯ್ತಿ
ಬಿಲ್ ಕಲೆಕ್ಟರ್ ಲೋಕೇಶ್, ನೀರುಗಂಟಿ ಶೇಖರಪ್ಪ 5000 ರೂ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಕೌಲಾಪೂರೆ, ಎಎಸ್ಪಿ ಕಲಾವತಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್‌ಪ್ರಭು.ಬ.ಸೂರಿನ, ಸರಳ ಪಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



