ದಾವಣಗೆರೆ: 6ನೇ ವೇತನ ಆಯೋಗದ ಅನ್ವಯ ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
ಮುಷ್ಕರದ ಮಧ್ಯೆ ಜಿಲ್ಲೆಯಲ್ಲಿ ಭಾನುವಾರ 100 ಬಸ್ ಗಳು ಕಾರ್ಯಾಚರಣೆ ನಡೆಸಿವೆ. 134 ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಈ ಮೂಲಕ ಕಳೆದ 12 ದಿನದಿಂದ ನಡೆಸುತ್ತಿರುವ ಮುಷ್ಕರದಿಂದ 3.75 ಕೋಟಿ ನಷ್ಟ ಉಂಟಾಗಿದೆ.



