ದಾವಣಗೆರೆ: ದಾವಣಗೆರೆ ಪ್ರಯಾಣಿಕರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಲು ಶಿವವೊಗ್ಗ, ಇಲ್ಲವೇ ರೈಲಿನಲ್ಲಿ ಕಡೂರು ಹೋಗಿ ಹೋಗಬೇಕಿತ್ತು. ಇದೀಗ ದಾವಣಗೆರೆಯಿಂದಲೇ KSRTC ದಾವಣಗೆರೆ ವಿಭಾಗದಿಂದ ನೇರವಾಗಿ ಧರ್ಮಸ್ಥಳಕ್ಕೆ ಬಸ್ ಸಂಪರ್ಕ ಕಲ್ಪಿಸಿದೆ.
ದಾವಣಗೆರೆಯಿಂದ ಬಾಡ, ಸಂತೇಬೆನ್ನೂರು, ಚನ್ನಗಿರಿ, ಅಜ್ಜಂಪುರ,ಕಡೂರು, ಚಿಕ್ಕಮಗಳೂರು ಮೂಲಕ ಧರ್ಮಸ್ಥಳ ತಲುಪಲು KSRTC ನೂತನ ಬಸ್ ವ್ಯವಸ್ಥೆ ಮಾಡಿದೆ. ಕೇವಲ 6 ತಾಸಿನ ಪ್ರಯಾಣವಾಗಿದ್ದು, ದಾವಣಗೆರೆಯಿಂದ ಸಂಜೆ 5.30ಕ್ಕೆ ಬಿಡುವ ಬಸ್ ರಾತ್ರಿ 11.30 ಕ್ಕೆ ಧರ್ಮ ಸ್ಥಳ ತಲುಪಲಿದೆ. ಬಸ್ ದರವೂ ಕೂಡ ಕಡಿಮೆ ಇದ್ದು, ಶ್ರೀ ಮಂಜುನಾಥ ನ ದರ್ಶನ್ ಪಡೆಯಲು ಉತ್ತಮ ಅವಕಾಶ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.