ದಾವಣಗೆರೆ; ದಾವಣಗೆರೆ ಹಾಗೂ ಹರಿಹರರಿಂದ ಜೋಗ ಮತ್ತು ಶಿರಸಿಗೆ ಜುಲೈ 16 ರಿಂದ ಪ್ರತಿ ಭಾನುವಾರಗಳಂದು ಪ್ರಯಾಣಿಕರಿಗೆ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆಯಡಿ ಸೌಲಭ್ಯ ಕಲ್ಪಿಸಲಾಗಿದೆ.
ಬೆಳಿಗ್ಗೆ 7 ಗಂಟೆಗೆ ದಾವಣಗೆರೆಯಿಂದ ಹೊರಟು 10.30 ಕ್ಕೆ ಶಿರಸಿ, ಮಧ್ಯಾಹ್ನ 12 ಗಂಟೆಗೆ ಶಿರಸಿಯಿಂದ ಹೊರಟು 1.30 ಕ್ಕೆ ಜೋಗ, ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 8 ಗಂಟೆಗೆ ದಾವಣಗೆರೆ ತಲುಪುವುದು. ಎರಡೂ ಕಡೆ ಸೇರಿ ನೇರ ಪ್ರಯಾಣಿಕರಿಗೆ ರೂ.600 ಮತ್ತು ಮಕ್ಕಳಿಗೆ ರೂ.450 ಪ್ರಯಾಣ ದರ ಹಾಗೂ ಹರಿಹರದಿಂದ ಬೆಳಿಗ್ಗೆ 7.30 ಗಂಟೆಗೆ ಹೊರಟು 10.30 ಕ್ಕೆ ಶಿರಸಿ, ಮಧ್ಯಾಹ್ನ 12 ಗಂಟೆಗೆ ಶಿರಸಿಯಿಂದ ಹೊರಟು 1.30 ಕ್ಕೆ ಜೋಗ, ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 7.30 ಗಂಟೆಗೆ ದಾವಣಗೆರೆ ತಲುಪುವುದು. ಎರಡೂ ಕಡೆ ಸೇರಿ ನೇರ ಪ್ರಯಾಣಿಕರಿಗೆ ರೂ.575 ಮತ್ತು ಮಕ್ಕಳಿಗೆ ರೂ.430 ಪ್ರಯಾಣ ದರ ಇರುತ್ತದೆ.
ಮುಂಗಡ ಬುಕ್ಕಿಂಗ್ ಮಾಡಲು ಬುಕ್ಕಿಂಗ್ ಕೌಂಟರ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕರಾರಸಾ ನಿಗಮದ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.



