ದಾವಣಗೆರೆ: ಕೊಟ್ಟೂರು ಶ್ರೀ ಗುರು ಬಸವ ರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ ಫೆ.16 ರಂದು ನಡೆಯುವ ಕೊಟ್ಟೂರು ರಥೋತ್ಸವಕ್ಕೆ ಹೊರಡಲು ಫೆ.12 ರಂದು 44ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಲಾಗುವುದು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಅಂದು ಸಂಜೆ 4ಗಂಟೆಗೆ ಚೌಕಿಪೇಟೆ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ 4 ಗಂಟೆಯಿಂದ 5ರವರೆಗೆ ವಚನ ಸಂಗೀತ ನಡೆಯಲಿದೆ. ಹೆಬ್ಬಾಳು ಶ್ರೀ ರುದ್ರೇಶ್ವರ ಸ್ವಾಮಿ, ಅಯ್ಯನಹಳ್ಳಿ ಶ್ರೀ ಮಹೇಶ್ವರ ಸ್ವಾಮಿ, ಕೊಟ್ಟೂರು ಶ್ರೀ ಶಂಕರಸ್ವಾಮಿಗಳು,ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಸ್ವಾಮಿಗಳು ನೇತೃತ್ವದಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಅಥಣಿ ವೀರಣ್ಣ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಎಸ್.ಎ. ರವೀಂದ್ರನಾಥ, ಎಸ್.ವಿ. ರಾಮಚಂದ್ರಪ್ಪ, ದೇವರಮನಿ ಶಿವಕುಮಾರ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಉಪಸ್ಥಿತರಿರುವರು.
ನಿರ್ದೇಶಕ ಸಿ.ಎಸ್. ಜಯರಾಜ್ ಮಾತನಾಡಿ, ಫೆ.14 ರಂದು ಸಂಜೆ 4ಗಂಟೆಗೆ ಅರಸೀಕೆರೆ ಶ್ರೀ ಗುರು ಕೋಲಶಾಂತೇಶ್ವರ ವಿರಕ್ತಮಠದಲ್ಲಿ 25 ನೇ ವರ್ಷದ ಔಷಧೋಪಚಾರ ಸೇವೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿದ್ದು, ವಿರಕ್ತ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಉದ್ಯಮಿ ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.ಅತಿಥಿಗಳಾಗಿ ಡಾ. ಡಿ. ಮಂಜುನಾಥ್, ಡಾ. ಸಿದ್ದೇಶ್ ಬಿಸ್ನಳ್ಳಿ, ಪ್ರೊ. ಡಾ. ಮಲ್ಲಿಕಾರ್ಜುನ್ ಜವಳಿ, ಜಗನ್ನಾಥ್ ನಾಡಿಗೇರ್, ಸಿ.ಎಸ್. ರಾಜಣ್ಣ, ಜಿ.ಪಿ.ರವಿಪ್ರಸಾದ್, ಉಮಾಕಾಂತ್ ಆರ್. ಪಾಟೀಲ್, ಸಿ.ಹೆಚ್. ಗಿರೀಶ್, ಬಿ. ಮಲ್ಲಿಕಾರ್ಜುನ್, ಜಗದೀಶ್ ಸಾವಳಗಿ, ಅಜಯ್, ಕೆ. ಕೊಟ್ರೇಶ್ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿ. ಚಿದಾನಂದ್, ಮಲ್ಲಾಬಾದಿ ಗುರುಬಸವ ರಾಜ್, ಕಂಬಿನೂಲ್ ರುದ್ರಬಸವರಾಜ್, ವಿನುತಾ ರವಿ, ಬೂಸ್ನೂರು ಸುಜಾತ ಹಾಗೂ ಜೋಳದ ಕೊಟ್ರಪ್ಪ ಮತ್ತಿತರರು ಇದ್ದರು.