ದಾವಣಗೆರೆ: ದಾವಣಗೆರೆ ಹೊರ ವಲಯದ ತಾಲ್ಲೂಕು ಎಚ್. ಕಲ್ಪನಹಳ್ಳಿಯಲ್ಲಿ ಮೆಘಾ ಡೇರಿಗೆ ನಿರ್ಮಾಣಕ್ಕೆ 14 ಎಕರೆ ಜಮೀನು ಮಂಜೂರಾಗಿದ್ದು, 5 ಲಕ್ಷ ಲೀಟರ್ ಸಾಮಾರ್ಥ್ಯದ 280 ಕೋಟಿ ವೆಚ್ಚದ ಮೆಘಾ ಡೇರಿ ನಿರ್ಮಿಸಲಾಗುವುದು ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ (ಶಿಮುಲ್) ವಿದ್ಯಾಧರ ಹೇಳಿದರು.
- ಎಚ್. ಕಲ್ಪನಹಳ್ಳಿಯಲ್ಲಿ ಮೆಘಾ ಡೇರಿಗೆ ನಿರ್ಮಾಣಕ್ಕೆ 14 ಎಕರೆ
- 5 ಲಕ್ಷ ಲೀಟರ್ ಸಾಮಾರ್ಥ್ಯ
- 280 ಕೋಟಿ ವೆಚ್ಚದ ಮೆಘಾ ಡೇರಿ
- ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯಿಂದ 196 ಕೋಟಿ ಅನುದಾನ
- ಶಿಮುಲ್ ನಿಂದ 84 ಕೋಟಿ
ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕಿನ ಸಂಘಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಆದರೆ, ಮಾರುಕಟ್ಟೆ ಸಮಸ್ಯೆ ಇದೆ. ಇತ್ತೀಚೆಗೆ 50ಕ್ಕೂ ಹೆಚ್ಚು ಪಾರ್ಲರ್‌ಗಳನ್ನು ತೆರೆಯಲಾಗಿದೆ. ಪ್ರತಿ ವರ್ಷ 35 ಕೋಟಿಯಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯಿಂದ ಸಹಾಯಧನ
ಶಿಮುಲ್ ಒಕ್ಕೂಟದ ನಿರ್ದೇಶಕ ಎಚ್.ಕೆ. ಬಸಪ್ಪ ಮಾತನಾಡಿ, ಮೆಘಾ ಡೇರಿ ನಿರ್ಮಾಣಕ್ಕೆ 280 ಕೋಟಿ ಯೋಜನಾ ವೆಚ್ಚದ ವರದಿ ತಯಾರಿಸಿದ್ದು, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ಟರ್ನ್ ಕೀ ಆಧಾರದ ಮೇಲೆ ಇದನ್ನು ನಿರ್ಮಿಸಲಿದೆ. ಇದರಲ್ಲಿ 84 ಕೋಟಿಯಷ್ಟು ಹಣವನ್ನು ನಮ್ಮ ಒಕ್ಕೂಟದಿಂದ ಸ್ವಂತವಾಗಿ ಬಳಸುತ್ತಿದ್ದೇವೆ. ಉಳಿದ 196 ಕೋಟಿ ಅನುದಾನವನ್ನು ನಾವು ಎನ್‍ಡಿಡಿಬಿ ಸಾಲವಾಗಿ ನೀಡಲಿದೆ ಎಂದು ತಿಳಿಸಿದರು.



