ಬೆಂಗಳೂರು: ಆರನೇ ವೃತನ ಆಯೋಗದ ಅನ್ವಯ ವೇತನ ಹೆಚ್ಚಳಕ್ಕೆಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 11ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದ ಮಧ್ಯೆಯೇ ಮಧ್ಯಾಹ್ನ 1 ಗಂಟೆ ವೇಳೆಗೆ ರಾಜ್ಯಾದ್ಯಂತ ನಾಲ್ಕು ನಿಗಮದಿಂದ 5,576 ಬಸ್ ಗಳು ಕಾರ್ಯಾಚರಣೆ ಆರಂಭಿಸಿವೆ. ಈ ಬಗ್ಗೆ ಕೆಎಸ್ ಆರ್ ಟಿಸಿ ಮಾಹಿತಿ ನೀಡಿದ್ದು, ಮಧ್ಯಾಹ್ನ 1 ಗಂಟೆಗೆ KSRTC 2,537, BMTC 945 , NEKRTC 1,144 , NWKRTC 950 ಬಸ್ ಗಳು ಸೇರಿದಂತೆ ಒಟ್ಟು 5,576 ಬಸ್ ರಸ್ತೆಗೆ ಇಳಿದಿವೆ.



