ಹರಿಹರ: ತಾಲೂಕಿನ ತುಂಗಾಭದ್ರಾ ನದಿ ತಟದಲ್ಲಿ ಇಂದು ಹರಿಹರದ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.ಹರಜಾತ್ರೆ ಮತ್ತು ಮಕರ ಸಂಕ್ರಮಣ ಹಾಗೂ ನನ್ನ ಊರು ನನ್ನ ಹೊಣೆಯ ಸ್ಥಳೀಯ ಸಂಸ್ಥೆ ಸಹಕಾರದಿಂದ ಸ್ವಚ್ಛತೆ ನೆರವೇರಿಸಿದರು. ಸತತ ಎರಡನೇ ವಾರ ಶ್ರೀಗಳ ನೇತೃತ್ವದಲ್ಲಿ ಸ್ಛಚ್ಛತೆ ಕಾರ್ಯ ನಡೆಯಿತು.ಮಕರ ಸಂಕ್ರಮಣದ ಹಿನ್ನಲೆಯಲ್ಲಿ ಪುಣ್ಯ ಸ್ನಾನಕ್ಕೆ ಸಹಸ್ರಾರು ಭಕ್ತರ ಆಗಮಿಸಲಿದ್ದಾರೆ. ನದಿ ತಟದಲ್ಲೇ ಪೂಜೆ ಕಾರ್ಯ, ಹಬ್ಬದೂಟ ನಡೆಯಲಿದೆ.



