ದಾವಣಗೆರೆ: ಇಂದು (ಜ.31) 220 ಕೆ.ವಿ. ಸ್ವೀಕರಣಾ ಕೇಂದ್ರದಿಂದ ಹೊರಡುವ ವಾಟರ್ ವಕ್ರ್ಸ್, ತೋಳಹುಣಸೆ, ಅತ್ತಿಗೆರೆ ಮತ್ತು ಯಲ್ಲಮ್ಮ ಫೀಡರ್ ಹಾಗೂ 66/11 ಕೆ.ವಿ. ವಿ.ವಿ. ಕೇಂದ್ರ ಯರಗುಂಟೆಯಿಂದ ಹೊರಡುವ ಕರೂರು ಇಂಡಸ್ಟ್ರಿಯಲ್ ಫೀಡರ್‍ನಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಯವಾಗಲಿದೆ.
ವಾಟರ್ ವಕ್ರ್ಸ್ ಫೀಡರ್ ವ್ಯಾಪ್ತಿಯ ದೂರದರ್ಶನಕೇಂದ್ರ, ಮಹಾನಗರ ಪಾಲಿಕೆ ನೀರು ಸರಬರಾಜು ಘಟಕಗಳು, ಸಕ್ರ್ಯೂಟ್ ಹೌಸ್, ಭೂಸೇನಾ ನಿಗಮ, ಜಿಲ್ಲಾಪಂಚಾಯತ್ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.ತೋಳಹುಣಸೆ ಫೀಡರ್ ವ್ಯಾಪ್ತಿಯ ಗ್ರಾಮೀಣ ಪದೇಶಗಳಾದ ಪಾಮೇನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳು. ಅತ್ತಿಗೆರೆ ಫೀಡರ್ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಾದ ಪಾಮೇನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳು.
ಯಲ್ಲಮ್ಮಫೀಡರ್ ವ್ಯಾಪ್ತಿಯ ಪಾಮೇನ ಹಳ್ಳಿ & ಬೆಳವನೂರು ನೀರಾವರಿ ವ್ಯಾಪ್ತಿಯ ಪ್ರದೇಶಗಳು ಸುತ್ತಮುತ್ತ ಪ್ರದೇಶಗಳು ಹಾಗೂ ಕರೂರು ಇಂಡಸ್ಟ್ರಿಯಲ್ ಫೀಡರ್ ವ್ಯಾಪ್ತಿಯ ಕರೂರು ಇಂಡಸ್ಟ್ರಿಯಲ್ ಏರಿಯಾ, ಜಿಲ್ಲಾಧಿಕಾರಿಗಳ ಕಛೇರಿ, ಜಿ.ಎಮ್.ಐ.ಟಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.