Connect with us

Dvgsuddi Kannada | online news portal | Kannada news online

ದಾವಣಗೆರೆ:  ಎಬಿವಿಪಿಯಿಂದ ಶ್ರೀ ಕನಕದಾಸರ ಜಯಂತಿ

ದಾವಣಗೆರೆ

ದಾವಣಗೆರೆ:  ಎಬಿವಿಪಿಯಿಂದ ಶ್ರೀ ಕನಕದಾಸರ ಜಯಂತಿ

ದಾವಣಗೆರೆ:  ನಗರದ ಕುರುಬಾ ವಿದ್ಯಾರ್ಥಿ ವಸತಿ‌ ನಿಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗು ಬೀರಲಿಂಗೇಶ್ವರ ವಿದ್ಯಾ ವರ್ಧಕ ಸಂಘದವತಿಯಿಂದ ದಾಸ ಶ್ರೇಷ್ಠ ಶ್ರೀ ಕನಕದಾಸರ  ಜಯಂತ್ಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಮಹಾ ನಗರಾಧ್ಯಕ್ಷ  ಪವನ್ ರೇವಣಕರ್,  ಎಲ್ಲರಿಗೂ 533 ನೇ‌ ಜಯಂತೋತ್ಸವದ ಶುಭಾಷಯ ಕೋರಿದರು. ಸಮಾಜದಲ್ಲಿರುವ ಮೇಲು ಕೀಳು ಜಾತಿ ಎಂಬ ವಿಷ ಬೀಜಾಸುರಗಳ ವಿರುದ್ಧ  ಭಕ್ತಿ ಎಂಬ ಸದ್ಮಾರ್ಗದಲ್ಲಿ ಶ್ರೀ ಕೃಷ್ಣನ ಪರಮ ಭಕ್ತರಾದಿದ್ದ ಕನಕ ದಾಸರು,  ಪ್ರವಚನಗಳಿಂದ ಮಾಣಿಕ್ಯನಂತೆ ಪ್ರಜ್ವಲಿಸಿದ ದಾಸ ಶ್ರೇಷ್ಟರು. ಅವರ ನುಡಿಗಳು ನಮ್ಮ ಸಮಾಜಕ್ಕೆ ಸದಾ ಮಾರ್ಗದರ್ಶನ. ಅವರನ್ನು ಕೇವಲ‌ ಕುರುಬ ಸಮಾಜಕ್ಕೆ ಸೀಮಿತವಾಗಿಸಿ‌ ಬಿಟ್ಟಿದ್ದೇವೆ.  ಅವರು  ಹಿಂದೂ ಧರ್ಮದ ಆಸ್ತಿ ಎಂದರು.

ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ಮಾತನಾಡಿ,  ನಾನು ಎಂಬುದನ್ನು ತ್ಯಜಿಸಿದರೆ ಮಾತ್ರ ಸ್ವರ್ಗ ಪುಣ್ಯಪ್ರಾಪ್ತಿ ಆಗುವುದ.ಕನಕದಾಸರು  ಎಲ್ಲದನ್ನೂ ತ್ಯಜಿಸಿ ಸಮಾಜಕ್ಕಾಗಿ‌ ಶ್ರಮಿಸಿದರು ಎಂದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಪ್ರಕಾಶ್ ಮಳಲ್ಕೆರೆ, ಶ್ರೀ ಬಿ.ದಿಳ್ಯಪ್ಪಾ ಮಾಜಿ ಅಧ್ಯಕ್ಷರು, ಕನಕ ಬ್ಯಾಂಕ್ ಅಧ್ಯಕ್ಷರು ಶ್ರೀ ಲೋಕಿಕೆರೆ ಸಿಧ್ಧಪ್ಪ, ನಿರ್ದೇಶಕರು ಶಶಿಧರ್ ಹೆಚ್.ವೈ, ಸಿ.ಬಿ‌ ಅರುಣ್ ಕುಮಾರ್, ಪ್ರಾಂಶುಪಾಲರಾದ ರಾಜಶೇಖರ್, ಮತ್ತು ಸಿಬ್ಬಂಧಿವರ್ಗದವರು ಹಾಗು ಅಭಾವಿಪದ ಮಾಧ್ಯಮ ಜಿಲ್ಲಾ ಪ್ರಮುಖ್ ಆಕಾಶ್.ಇಟಗಿ, ನಗರ ಸಹ ಕಾರ್ಯದರ್ಶಿ ಕೊಟ್ರೇಶ್, ಕಾರ್ಯಕರ್ತರಾದ ಸುಮನ್, ನಿತಿನ್, ಹೇಮಂತ ಮತ್ತು ಇತರರು ಇದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});