Connect with us

Dvgsuddi Kannada | online news portal | Kannada news online

ದಾವಣಗೆರೆ: ಐಟಿಐ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ; ಮಾ. 20ರಂದು ಅಪ್ರೆಂಟಿಸ್ ಮೇಳ

ದಾವಣಗೆರೆ

ದಾವಣಗೆರೆ: ಐಟಿಐ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ; ಮಾ. 20ರಂದು ಅಪ್ರೆಂಟಿಸ್ ಮೇಳ

ದಾವಣಗೆರೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಎಲ್ಲಾ ಐ.ಟಿ.ಐ ಹಾಗೂ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಗೆ ಶಿಶಿಕ್ಷು(ಅಪ್ರೆಂಟಿಸ್) ಮೇಳವನ್ನು ಮಾ.20 ರಂದು ಬೆಳಿಗ್ಗೆ 10ರಿಂದ ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಶಿಶಿಕ್ಷು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಐ.ಟಿ.ಐ ಅಂತಿಮ ವರ್ಷದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್, ಐ.ಟಿ.ಐ ಮಾರ್ಕ್ಸ್ ಕಾರ್ಡ್, ಪೋಟೋ ಆಧಾರ್‍ ಕಾರ್ಡ್ , ಕನಿಷ್ಠ 02 ಬಯೋಡಾಟಾ ಪ್ರತಿ ತರತಕ್ಕದ್ದು. ಶಿಶಿಕ್ಷು ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ 08192-260192 ಅಥವಾ 9902232155, 8310273541 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top