ದಾವಣಗೆರೆ: ಶಾಮನೂರು ಎಜುಕೇಷನ್ ಟ್ರಸ್ಟ್ ನ ಶ್ರೀ ಮತಿ ಪುಷ್ಪ ಶಾಮನೂರು ಮಹಾಲಿಂಗಪ್ಪ ರೆಸಿಡೆನ್ಸಿಯಲ್ ಸಿಬಿಎಸ್ ಸಿ, ಐಸಿಎಸ್ ಇ ಸ್ಕೂಲ್ ಹಾಗೂ ಸೈನ್ಸ್ ಕಾಲೇಜಿನಲ್ಲಿ ವಿವಿಧ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿಜ್ಞಾನ, ಗಣಿತ, ಸಮಾಜ ಮತ್ತು ಇಂಗ್ಲಿಷ್ ವಿಷಯದ ಶಿಕ್ಷಕರು, ಶಾಲೆ ಸಂಯೋಜಕರು ಹಾಗೂ ಪಿಯುಸಿ ಕಾಲೇಜಿಗೆ ಜ್ಯೂನಿಯರ್, ಸೀನಿಯರ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದಲ್ಲದೆ ಬಾಸ್ಕೆಟ್ ಬಾಲ್, ಸ್ಕೆಟ್ಟಿಂಗ್, ವಾಲಿಬಾಲ್, ಸ್ವಿಮ್ಮಿಂಗ್, ಯೋಗ ಕೋಚ್, ಪ್ರೆಂಟ್ ಆಫ್ ಎಕ್ಸಿಕ್ಯೂಟಿವ್, ಅಡ್ಮಿಷನ್ ಕೌನ್ಸಿಲರ್, ಅಕೌಂಟ್ ಮ್ಯಾನೇಜರ್ , ಎಚ್ ಆರ್ ಮ್ಯಾನೇಜರ್ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂವ್ ನಡೆಯಲಿದೆ.
ಶಿಕ್ಷಕರಿಗೆ 1ರಿಂದ 4ನೇ ತರಗತಿ ವರೆಗೆ 37 ಸಾವಿರ ವೇತನ, 5ರಿಂದ 8ನೇ ತರಗತಿ ವರೆಗೆ 45 ಸಾವಿರ,9ರಿಂದ 10ನೇ ತರಗತಿ ವರೆಗೆ 55 ಸಾವಿರ, ಶಾಲಾ ಯೋಜಕರಿಗೆ 50 ಸಾವಿರ ನಿಗದಿ ಮಾಡಲಾಗಿದೆ.
ಮಾ.12ರಿಂದ ಮಾ.19ರವರೆಗೆ ಬೆಳಗ್ಗೆ 10 ದಿಂದ ಸಂಜೆ 04 ಗಂಟೆ ವರೆಗೆ ಸಂದರ್ಶನ ನಡೆಯಲಿದೆ. ವಿಳಾಸ: #5335, ಮೊದಲ ಮೇನ್ ರೋಡ್, ಬಾಪೂಜಿ ಇಂಜಿನಿಯರ್ ಕಾಲೇಜು ಹತ್ತಿನ, ಸ್ವಾಮಿ ವಿವೇಕನಂದ ಬಡಾವಣೆ, ದಾವಣಗೆರೆ: ಇಮೇಲ್-hrspsm.set@gmail.com . ಹೆಚ್ಚಿನ ಮಾಹಿತಿಗೆ 91084118008, 8970071100 ಸಂಪರ್ಕಿಸಿ .



