ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುದಾನದಡಿ ನಿರ್ವಹಿಸಲಾಗುವ ಹರಿಹರದಲ್ಲಿನ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಅಗತ್ಯವಿರುವ ಗೌರವಧನ ಆಧಾರದ ಸಮಾಲೋಚಕರ 01 ಹುದ್ದೆಯನ್ನು ಭರ್ತಿ ಮಾಡಲು ಉದ್ದೇಶಿಸಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮಾಲೋಚಕರಿಗೆ ಪ್ರತಿ ತಿಂಗಳು ರೂ. 15,000 ಗಳ ಗೌರವಧನ ನೀಡಲಾಗುವುದು. ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು, ವಿದ್ಯಾರ್ಹತೆ ಎಂ.ಎಸ್.ಡಬ್ಲ್ಯೂ, ಎಂ.ಎ(ಸೈಕಾಲಜಿ/ಸೋಷಿಯಾಲಜಿ/ಎಂ.ಎಸ್) ಕೌನ್ಸಲಿಂಗ್ ಮತ್ತು ಸೈಕೋಥೆರಪಿ ಜೊತೆಗೆ ಒಂದು ವರ್ಷ ಕಂಪ್ಯೂಟರ್ ಅನುಭವ ಇರಬೇಕು.
ಅರ್ಜಿ ಸಲ್ಲಿಸಲು ಸೆ.25 ಕೊನೆಯ ದಿನವಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಆಸ್ಪತ್ರೆ ರಸ್ತೆ, ಮೋಚಿ ಕಾಲೋನಿ, ಹರಿಹರ ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08192-244045, ಮೊಬೈಲ್ ನಂ.9845908219, 9742550797 ಇವರನ್ನು ಸಂಪರ್ಕಿಸಬಹುದು ಎಂದು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.