Connect with us

Dvgsuddi Kannada | online news portal | Kannada news online

ದಾವಣಗೆರೆ: ಗಣೇಶ ಹಬ್ಬ ಆಚರಣೆ ಹಿನ್ನೆಲೆ ಮದ್ಯ ಸರಬರಾಜು, ಮಾರಾಟ ನಿಷೇಧ

ದಾವಣಗೆರೆ

ದಾವಣಗೆರೆ: ಗಣೇಶ ಹಬ್ಬ ಆಚರಣೆ ಹಿನ್ನೆಲೆ ಮದ್ಯ ಸರಬರಾಜು, ಮಾರಾಟ ನಿಷೇಧ

ದಾವಣಗೆರೆ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆ.10, 12, 14 ರ ಬೆಳಿಗ್ಗೆ 6 ರಿಂದ ಮರುದಿನ ಬೆಳಿಗ್ಗೆ 6 ರವರೆಗೆ ಮುಂಜಾಗೃತಾ ಕ್ರಮವಾಗಿ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ.

ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1) ಕಾಯ್ದೆಯಡಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಮುಂಜಾಗ್ರತಾ ಕ್ರಮವಾಗಿ ಸೆ.10 ರ ಬೆಳಿಗ್ಗೆ 6 ರಿಂದ ಸೆ.11 ರ ಬೆಳಿಗ್ಗೆ 6 ರವರೆಗೆ, ಸೆ.12 ರ ಬೆಳಿಗ್ಗೆ 6 ರಿಂದ ಸೆ.13 ರ ಬೆಳಿಗ್ಗೆ 6 ರವರೆಗೆ ಹಾಗೂ ಸೆ.14 ರ ಬೆಳಿಗ್ಗೆ 6 ರಿಂದ ಸೆ.15 ರ ಬೆಳಿಗ್ಗೆ 6 ರವರೆಗೆ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಗೊಳಿಸಲು ಆದೇಶ ಹೊರಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top