Connect with us

Dvgsuddi Kannada | online news portal | Kannada news online

ಪ್ರತಿಯೊಂದು ಸಮಾಜ ಹಾಸ್ಟೆಲ್, ಸಮುದಾಯ ಭವನದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಲಿ: ಮೇಯರ್ ಎಸ್.ಟಿ. ವೀರೇಶ್

ದಾವಣಗೆರೆ

ಪ್ರತಿಯೊಂದು ಸಮಾಜ ಹಾಸ್ಟೆಲ್, ಸಮುದಾಯ ಭವನದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಲಿ: ಮೇಯರ್ ಎಸ್.ಟಿ. ವೀರೇಶ್

ದಾವಣಗೆರೆ: ಪ್ರತಿಯೊಂದು ಸಮಾಜವು ತಮ್ಮ ತಮ್ಮ ಸಮಾಜದ ಹಾಸ್ಟೆಲ್, ಸಮುದಾಯ ಭವನಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಮೇಯರ್  ಎಸ್.ಟಿ. ವೀರೇಶ್ ಕರೆ ನೀಡಿದರು.

ಜೈನ ಸಮುದಾಯದಿಂದ ಆವರಗೆರೆಯ ಬಳಿ 65 ಬೆಡ್ ವ್ಯವಸ್ಥೆಯ ಕೋವಿಡ್ ಕೇರ್ ಸೆಂಟರ್ ಸಿದ್ಧತೆ  ಪರೀಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ರೋಗಿಗಳು ಸೂಕ್ತ ಬೆಡ್ ಸಿಗದೇ ಪರದಾಡುತ್ತಿದ್ದಾರೆ.  ಹೀಗಾಗಿ ಆಯಾ ಸಮುದಾಯ ಮುಖಂಡರು  ಸಮುದಾಯ ಭವನ, ಹಾಸ್ಟೆಲ್ ಗಳಲ್ಲಿ ಸೂಕ್ತ ಬೆಡ್ ವ್ಯವಸ್ಥೆ ಕಲ್ಪಿಸಲು ಮುಂದೆ ಬರಬೇಕು. ಇದಕ್ಕೆ ಬೇಕಾದ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಮಹಾನಗರ ಪಾಲಿಕೆ ಸಿದ್ಧವಿದೆ ಎಂದು ತಿಳಿಸಿದರು.

jaina samaja 2

ಎಲ್ಲವನ್ನು ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಸಮಾಜ ಸರ್ಕಾರದ ಜೊತೆ ಕೈ ಜೋಡಿಸಬೇಕು. ಜನಗರ ಜೈನ ಸಮುದಾಯ ಸ್ವಯಂ ಪ್ರೇರಣೆಯಿಂದ 65 ಬೆಡ್ ಮತ್ತು ಆರೋಗ್ಯ ಕಿಟ್ , ಊಟ ವ್ಯಸ್ಥೆಯನ್ನು ಒದಗಿಸಲು ಮುಂದೆ ಬಂದಿದೆ. ಜೈನ ಸಮುದಾಯದ ಕಾರ್ಯಕ್ಕೆ ಮಹಾನಗರ ಪಾಲಿಕೆ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ. ಇದೇ ರೀತಿ ಬೇರೆ ಸಮುದಾಯಗಳು ಕೋವಿಡ್ ಕೇರ್ ಸೇಂಟರ್ ತೆರೆಯಬೇಕೆಂದು ಮನವಿ ಮಾಡಿದರು.

ದಾವಣಗೆರೆ ಜೈನ ಸಮುದಾಯ ದಿನ 24 ತಾಸು ಕಾರ್ಯ ನಿರ್ವಹಿಸುವಂತಹ 65 ಬೆಡ್ ವ್ಯವಸ್ಥೆ ಹೊಂದಿದ ಕೋವಿಡ್ ಕೇರ್ ಸೆಂಟರ್ ನಾಳೆ (ಮೇ .5) ಉದ್ಘಾಟನೆಗೊಳ್ಳಲಿದೆ. ಇಲ್ಲಿ ಕೋವಿಡ್ ರೋಗಿಗಳಿಗೆ ಅಗತ್ಯವಾದ ಬೆಡ್,ವೈದ್ಯರು, ನರ್ಸ್ ಸೇರಿದಂತೆ ಊಟ ವ್ಯಸ್ಥೆಯನ್ನು ಕಲ್ಪಿಸಲಾಗಿದೆ.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top