ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಮರಿಕಟ್ಟೆ ಗ್ರಾಮದಲ್ಲಿ ಬಿರು ಗಾಳಿ, ಭಾರೀ ಮಳೆಗೆ ಪಪ್ಪಾಯಿ ಬೆಳೆ ನೆಲಕಚ್ಚಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.
ರೈತ ಮಹಿಳೆ ಗೌರಮ್ಮ ಎಂಬುವವರಿಗೆ ಸೇರಿದ 2 ಎಕರೆ ಹಾಗೂ ನಾಗರಾಜ್ ಅವರ 1 ಎಕರೆ ಪಪ್ಪಾಯಿ ಸಂಪೂರ್ಣ ಹಾನಿಯಾಗಿದ್ದು, ಅಂದಾಜು 5 ಲಕ್ಷ ಮೌಲ್ಯದ ಪಪ್ಪಾಯಿ
ಸಂಪೂರ್ಣ ಹಾನಿಯಾಗಿದೆ. ಜೊತೆಗೆ ಅಡಿಕೆ ಗಿಡಗಳು ಹಾನಿಗೊಳಗಾಗಿವೆ. ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿ, ನಷ್ಟದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.