ದಾವಣಗೆರೆ: ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರಪ್ಪ ಬರ್ತ್ ಡೇ ಪಾರ್ಟಿಯಲ್ಲಿ ಖತರ್ನಾಕ್ ಕಳ್ಳರು ಸೈಲೆಂಟ್ ಆಗಿ ಬಂದು ತನ್ನ ಕೈಚಳಕ ತೋರಿಸಿದ್ದಾರೆ. ಶಾಸಕರ ಆಪ್ತ ಸಹಾಯಕ ಮತ್ತು ಪ.ಪಂಚಾಯತಿ ಅಧ್ಯಕ್ಷೆ ವಿಶಾಲಾಕ್ಷಿ ಪತಿ ಓಬಳೇಶ್ ಜೇಬು ಕತ್ತರಿಸಿ 1 ಲಕ್ಷ ರೂ. ಹಣ ಎಗರಿಸಿ ಎಸ್ಕೇಪ್ ಆಗಿದ್ದಾರೆ.
ನಿನ್ನೆ( ಜ.17) ರಾತ್ರಿ ಶಾಸಕರ ಬರ್ತ್ ಡೇ ಪಾರ್ಟಿಯನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಸಕರಿಗೆ ಶುಭಾಶಯ ತಿಳಿಸಿ ಫೋಟೋ ತೆಗೆಸುವ ನೆಪದಲ್ಲಿ ವೇದಿಕೆ ಏರಿದ ಖತರ್ನಾಕ್ ಕಳ್ಳರು, ತನ್ನ ಕೈಚಳಕ ಪ್ರದರ್ಶಿಸಿದ್ದಾರೆ. ಶಾಸಕರ ಆಪ್ತ ಸಹಾಯಕ ಸಂತೋಷ್ ಮತ್ತು ಪ.ಪಂಚಾಯತಿ ಅಧ್ಯಕ್ಷೆ ವಿಶಾಲಾಕ್ಷಿ ಪತಿ ಓಬಳೇಶ್ ಅವರು ಜೇಬಿಗೆ ಕತ್ತರಿ ಹಾಕಿದ್ದಾನೆ.
ಕಾರ್ಯಕ್ರಮ ಆಯೋಜಕರ ಜೇಬಲ್ಲಿ ಹಣ ಇರಬಹುದು ಎಂದು ಲೆಕ್ಕಚಾರ ಹಾಕಿದ ಕಳ್ಳರು ನೂಕುನುಗ್ಗಲಿನಲ್ಲಿ ಸೈಲೆಂಟ್ ಆಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬಿಳಿ ಬಟ್ಟೆ ಹಾಕಿಕೊಂಡು ಪಕ್ಕಾ ಕಾರ್ಯಕರ್ತರಂತೆ ಬಂದಿದ್ದ ಬಿಳಿ ಬಟ್ಟೆಯಲ್ಲಿ ಬಂದಿದ್ದ ಕಳ್ಳರು ಸಂತೋಷ್ ಜೇಬಿನಿಂದ 50 ಸಾವಿರ ರೂ. ಓಬಳೇಶ್ ಜೇಬಿನಿಂದ 50 ಸಾವಿರ ರೂ. ಕದ್ದಿದ್ದಾರೆ. ಕಳ್ಳತನ ದೃಶ್ಯ ಸ್ಟೇಜ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.



