Connect with us

Dvgsuddi Kannada | online news portal | Kannada news online

ದಾವಣಗೆರೆ; ಖಾಸಗಿ ಬಸ್ -ಕಾರು ನಡುವೆ ಭೀಕರ ಅಪಘಾತ; ಲೆಕ್ಕ ಪರಿಶೋಧಕ ಸಾವು; ಮೂವರಿಗೆ ಗಂಭೀರ ಗಾಯ

ದಾವಣಗೆರೆ

ದಾವಣಗೆರೆ; ಖಾಸಗಿ ಬಸ್ -ಕಾರು ನಡುವೆ ಭೀಕರ ಅಪಘಾತ; ಲೆಕ್ಕ ಪರಿಶೋಧಕ ಸಾವು; ಮೂವರಿಗೆ ಗಂಭೀರ ಗಾಯ

ದಾವಣಗೆರೆ; ಖಾಸಗಿ ಬಸ್ -ಕಾರಿನ ‌ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದಾವಣಗೆರೆಯ ಹಿರಿಯ ಲೆಕ್ಕ ಪರಿಶೋಧಕ ಹಾಗೂ ವಕೀಲರೂ ಆದ ವಿ.ಎಸ್. ಅರುಣಾಚಲ ಶೆಟ್ಟಿ (72) ಅವರು ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡ ಮೂವರ ಸ್ಥಿತಿ ಗಂಭೀರವಾಗಿದೆ.

ಜಗಳೂರು ತಾಲ್ಲೂಕಿನ ಬಿಳಿಚೋಡು ಹೋಬಳಿಯ ನರೇನಹಳ್ಳಿ ಬಳಿ ಈ ಘಟನೆ ನಡೆದಿದೆ. ಅರುಣಾಚಲಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ ಉಜ್ಜಯಿನಿಯ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ ವಾಪಸ್ ಬರುವಾಗ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಈ ದುರಂತ ನಡೆದಿದೆ.

ಗಾಯಗೊಂಡಿರುವ ಮೂವರನ್ನು ದಾವಣಗೆರೆ ಮತ್ತು ಜಗಳೂರು ಪಟ್ಟಣದ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ ಒಬ್ಬ ಪ್ರಯಾಣಿಕನಿಗೂ ಗಾಯವಾಗಿದೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top