ದಾವಣಗೆರೆ: ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದು ಮತ್ತು ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜಿಲ್ಲಾ ರೈತ ಒಕ್ಕೂಟ ಇಂದು (ನ.18) ಕರೆ ನೀಡಿರುವ ಹೊನ್ನಾಳಿ, ನ್ಯಾಮತಿ ತಾಲ್ಲೂಕು ಬಂದ್ ವೇಳೆ ಹಾಲಿ ಶಾಸಕ ಶಾಂತನಗೌಡ ಮಾಜಿ ಶಾಸಕ ರೇಣುಕಾಚಾರ್ಯ ನಡುವೆ ವಾಗ್ವಾದ ನಡೆದಿದೆ.
ರೈತರು ರಸ್ತೆ ಮೇಲೆ ಮೆಕ್ಕೆಜೋಳ ಸುರಿದು ಆಕ್ರೋಶ
ಎರಡು ಪಕ್ಷದ ಕಾರ್ಯಕರ್ತರು, ಮುಖಂಡರ ನಡುವೆ ಗಂಪು ಘರ್ಷಣೆ, ವಾಗ್ವಾದ ನಡೆದಿದೆ. ಬಿಜೆಪಿ ಮುಖಂಡ ಮೇಲೆ ಕಾಂಗ್ರೆಸ್ ನಾಯಕರ ಹಲ್ಲೆ ಖಂಡಿಸಿ ಬಿಜೆಪಿ ಪ್ರತಿ ಭಟನೆ ತೀವ್ರಗೊಳಿಸಿತು. ಈ ನಡುವೆ ರೈತರು ರಸ್ತೆ ಮೇಲೆ ಮೆಕ್ಕೆಜೋಳ ಸುರಿದು, ಟಯರ್ ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಶಾಸಕ, ಮುಖಂಡರ ನಡೆಯನ್ನು ತೀವ್ರ ವಾಗಿ ಖಂಡಿಸಿದರು.

ಬಂದ್ ಮಾಡುವುದು ನಮ್ಮ ಹಕ್ಕು. ನಮ್ಮ ಹಕ್ಕು ಕಸಿದುಕೊಳ್ಳಲು ಬಿಡಲ್ಲ.
-ಮಾಜಿ ಸಚಿವ ರೇಣುಕಾಚಾರ್ಯ
ಅಂಗಡಿ, ಮುಚ್ಚುವ ವಿಚಾರವಾಗಿ ವಾಗ್ವಾದ
ಅಂಗಡಿಗಳನ್ನು ಮುಚ್ಚುವ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಎರಡು ಕಡೆ ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೆಲ ಕಾಲ ವಿಕೋಪಕ್ಕೆ ತಿರುಗಿತು.
ಕೈ ಕೈ ಮಿಲಾಯಿಸಿ ಗುಂಪು ಘರ್ಷಣೆ
ಬಂದ್ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಮುಚ್ಚಿಸಲು ಸಂಚರಿಸುತ್ತಿದ್ದ ಬೈಕ್ ರ್ಯಾಲಿ ತಡೆದ ಶಾಸಕ ಶಾಂತನಗೌಡ, ಅವಾಚ್ಯವಾಗಿ ನಿಂದಿಸಿ, ಬಾವುಟ ಕಸಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಸಹ ಬಿಜೆಪಿಗರ ಬಂದ್ ವಿರೋಧಿಸಿ ವಾಗ್ವಾದ ನಡೆಸಿದ ವೇಳೆ ಪರಿಸ್ಥಿತಿ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ಗುಂಪು ಘರ್ಷಣೆ ನಡೆಯಿತು.

ನ್ಯಾಯಯುತ ಬೆಲೆ ಘೋಷಣೆ ಗೆ ಆಗ್ರಹ
ಕೇಂದ್ರ ಸರ್ಕಾರ ಕ್ವಿಂಟಲ್ ಮೆಕ್ಕೆಜೋಳಕ್ಕೆ 2,400 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ರಾಜ್ಯದಲ್ಲಿ ಕ್ವಿಂಟಲ್ ಮೆಕ್ಕೆಜೋಳ 1,600ಕ್ಕಿಂತ ಕಡಿಮೆ ಬೆಲೆಗೆ ಖರೀದಿಯಾಗುತ್ತಿದೆ. ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆದು ನ್ಯಾಯಯುತ ಬೆಲೆ ಘೋಷಣೆ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಇತ್ತ ಬಂದ್, ಪ್ರತಿಭಟನೆಯ ನೇತೃತ್ವವಹಿಸಿದ್ದ ಮಾಜಿ ಸಚಿವ ರೇಣುಕಾಚಾರ್ಯ, ಬಂದ್ ಮಾಡುವುದು ನಮ್ಮ ಹಕ್ಕು. ನಮ್ಮ ಹಕ್ಕು ಕಸಿದುಕೊಳ್ಳಲು ಬಿಡಲ್ಲ. ಬಂದ್ ಯಶಸ್ವಿ ಮಾಡಿಯೇ ಮಾಡುತ್ತೇವೆ ಎಂದು ಗುಡುಗಿದರು.ನಸುಕಿನಲ್ಲಿ ಬೀದಿಗೆ ಇಳಿದ ಬಿಜೆಪಿ ಕಾರ್ಯಕರ್ತರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ರಸ್ತೆಗಳಲ್ಲಿ ಟೈರುಗಳಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ ಪ್ರಮುಖ ಗ್ರಾಮಗಳಲ್ಲಿ ಬಂದ್‌ಗೆ ರೈತರು ಕೈಜೋಡಿಸಿದರು.
ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ
ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕು ಬಂದ್ ಹಾಗೂ ಬೃಹತ್ ಪ್ರತಿಭಟನೆ ಯಶಸ್ವಿಯಾಗಿ ನೆಡೆಯುತ್ತಿದ್ದ ಸಂಧರ್ಭದಲ್ಲಿ ಹೊನ್ನಾಳಿ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಹೊನ್ನಾಳಿ ಶಾಸಕರು ಹಾಗೂ ಗೂಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಗಮಿಸಿ ಹೋರಾಟಕ್ಕೆ ಅಡ್ಡಿ ಪಡಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಏಕಾಏಕೆ ಬಿಜೆಪಿ ಮುಖಂಡರು, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾದ ಪಾಲಾಕ್ಷಪ್ಪ ಅವರ ಮೇಲೆ ಎರಡು ಬಾರಿ ಹಲ್ಲೆ ನೆಡೆಸಿ ಜೀವ ಬೆದರಿಕೆ ಹಾಕಿದು ಹೊನ್ನಾಳಿ ನಗರದ ಪೊಲೀಸ್ ಠಾಣೆಗೆ ಭೇಟಿ ನೀಡಿ ತಕ್ಷಣವೇ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯ ಪೊಲೀಸ್ ಅಧಿಕಾರಿಗಳಿಗೆ ರೇಣುಕಾಚಾರ್ಯ ತಿಳಿಸಿದರು.



