ದಾವಣಗೆರೆ: ಅದ್ಧೂರಿ ಹೋಳಿ ಸಂಭ್ರಮ; ಬಣ್ಣದೋಕುಳಿಯಲ್ಲಿ ಕುಣಿದು ಕುಪ್ಪಳಿಸಿದ ಯುವ ಸಮೂಹ..!

ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಈ ಬಾರಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.‌ ಅದರಲ್ಲೂ ನಗರದ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಹೋಳಿ‌ ಜೋಶ್ ತುಸು ಜೋರಾಗಿಯೇ ಇತ್ತು. ನಗರದೆಲ್ಲಡೆ ಯುವ ಸಮೂಹ,‌ ಮಕ್ಕಳು, ವಯಸ್ಕರು ಒಬ್ಬರಿಗೊಬ್ಬರು ಬಣ್ಣದೋಕುಳಿ ಎರಚಿ ಸಂಭ್ರಮಿಸಿದರು.

ಬಿ ಖಾತಾ ಪಡೆದರೂ ಅನಧಿಕೃತ ಎಂದು ನಮೂದು; ಕಟ್ಟಡ ಪರವಾನಿಗೆ, ಬ್ಯಾಂಕ್‌ ಸಾಲ ಸಿಗಲ್ಲ; ಬಿಜೆಪಿ ನಾಯಕರ ಆರೋಪ

ನಗರದ ಪ್ರಮುಖ ರಸ್ತೆಗಳಿಂದ ಬಣ್ಣದ ಓಕಳಿಯನ್ನು ಒಬ್ಬರಿಗೊಬ್ಬರು, ಹಚ್ಚುತ್ತಾ‌ ರಾಮ್ ಅಂಡ್ ಕೋ ಸರ್ಕಲ್ ಕಡೆ ಬಂದು ಸಂಭ್ರಮಿಸಿದರು. ಡಿಜೆ ಸೌಂಡ್ ನ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ಯುವಕ-ಯುವತಿಯರು, ಜೋರು ಕೇಕೆ..‌ಹಾಕಿ ಕುಣಿದು ಕುಪ್ಪಳಿಸಿದರು. ಮಧ್ಯಾಹ್ನದವರೆಗೆ ಯುವಕ – ಯುವತಿಯರು ನೃತ್ಯದ ಅಬ್ಬರ ರಂಗೇರಿತ್ತು.

247 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇಮಕ: ಸಚಿವ ಪ್ರಿಯಾಂಕ್ ಖರ್ಗೆ

ನಿನ್ನೆ (ಮಾ.13) ರಾತ್ರಿ ಕಾಮದಹನ ಮಾಡಿದ ಬಳಿಕ ಬಣ್ಣದೋಕುಳಿಯ ಸಂಭ್ರಮಕ್ಕೆ ಚಾಲನೆ ದೊರೆತಿತ್ತು. ಮಕ್ಕಳು, ಯುವಕರು ಸೇರಿದಂತೆ ಎಲ್ಲ ವರ್ಗದವರು ಬಣ್ಣ ಓಕಳಿಯಲ್ಲಿ ಸಂಭ್ರಮಿಸಿದರು.

ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜ್‌, ಯುಬಿಡಿಟಿ ಕಾಲೇಜು, ಬಿಐಇಟಿ ಕಾಲೇಜು ಸಹಿತ ವಿವಿಧ ಹಾಸ್ಟೆಲ್‌ಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಣ್ಣದಾಟದಲ್ಲಿ ಮುಳುಗಿದ್ದರು. ಇನ್ನೂ‌ ಪಿ.ಜೆ. ಬಡಾವಣೆ, ಎಂಸಿಸಿ ‘ಬಿ’ ಬ್ಲಾಕ್‌, ವಿನೋಬನಗರ, ವಿದ್ಯಾನಗರ, ಶಿವಕುಮಾರಸ್ವಾಮಿ ಬಡಾವಣೆ, ಬಿಐಇಟಿ ರಸ್ತೆ, ನಿಜಲಿಂಗಪ್ಪ ಬಡಾವಣೆ, ಬಿಡಿಟಿ ರಸ್ತೆ, ಮೆಡಿಕಲ್‌ ಕಾಲೇಜು ಹಾಸ್ಟೆಲ್‌ ರಸ್ತೆ, ಸಿದ್ದವೀರಪ್ಪ ಬಡಾವಣೆ, ಗಡಿಯಾರ ಕಂಬ, ಹಳೆ ದಾವಣಗೆರೆ, ಹೊಂಡದ ಸರ್ಕಲ್, ಆಂಜನೇಯ ಬಡಾವಣೆ, ಪಿಸಾಳೆ ಕಾಂಪೌಂಡ್‌, ಗಾಂಧಿ ವೃತ್ತ, ವಿನೋಬನಗರ, ಕಾಯಿಪೇಟೆ, ನಿಟುವಳ್ಳಿಯಲ್ಲಿ ಹೋಳಿ ಸಂಭ್ರಮಾಚರಣೆ ಜೋರಾಗಿತ್ತು.

ಪೊಲೀಸ್ ಪಥ ಸಂಚಲನ: ಕಾಮದಹನ ಮತ್ತು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಾವಣಗೆರೆ ನಗರದಲ್ಲಿ ಎರಡು ತಂಡಗಳಲ್ಲಿ ಪೊಲಿಸ್ ಪಥ ಸಂಚಲನ ನಡೆಸಲಾಯಿತು. ಮಟ್ಟಿಕಲ್ಲು, ವೆಂಕಟೆಶ್ವರ ವೃತ್ತ, ಅರಳಿಮರ ವೃತ್ತ, ಹಳೇಬೆತೂರು ರಸ್ತೆ, ಮದೀನ ಆಟೋ ಸ್ಟ್ಯಾಂಡ್ ಹಾಸಬಾವಿ ವೃತ್ತ , ಎಂ ಜಿ ರಸ್ತೆ ಕ್ರಾಸ್, ಬಸವರಾಜ ಪೇಟೆ, ಹಗೆದಿಬ್ಬ ವೃತ್ತ, ದುರ್ಗಾಂಬಿಕಾ ದೇವಸ್ಥಾನ, ಹೊಂಡದವೃತ್ತದ ವರೆಗೆ ಹಾಗೂ ಮತ್ತೊಂದೆಡೆ ಶಿವಪ್ಪಯ್ಯ ವೃತ್ತ , ಕೆಟಿಜೆ ನಗರ 8 ನೇಕ್ರಾಸ್ , ವಿದ್ಯಾರ್ಥಿ ಭವನ, ಸಿಜಿ ಆಸ್ಪತ್ರೆ ರಸ್ತೆ, ಗುಂಡಿ ವೃತ್ತ, ಡೆಂಟಲ್ ಕಾಲೇಜ್ ರೋಡ್, ಬಾಯ್ಸ್ ಹಾಸ್ಟೆಲ್ ರೋಡ್, ವೆಂಕಟೇಶ್ವರ ದೇವಾಸ್ಥಾನ, ಸ್ವಿಮ್ಮಿಂಗ್ ಪೂಲ್ ರಸ್ತೆ , ರೆಡ್ಡಿ ಬಿಲ್ಡಿಂಗ್ , ವಿನೋಬಾ ನಗರ 2 ಮುಖ್ಯ ರಸ್ತೆ ಸಾಗಿ ಪಿಬಿ ರಸ್ತೆ ವರೆಗೆ ಪಥ ಸಂಚಲನ ನಡೆಯಿತು.

Dvgsuddi: ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Recent Posts