ದಾವಣಗೆರೆ: ಶ್ರೀ ದುರ್ಗಾಂಬಿಕಾ ವಿದ್ಯಾ ಸಂಸ್ಥೆ (ರಿ) ಶಿವಾಜಿ ನಗರ ಆಶ್ರಯದಲ್ಲಿ ನಡೆಯುತ್ತಿರುವ ನಗರದ ಹೊಂಡದ ರಸ್ತೆಯ ಶ್ರೀ ದುರ್ಗಾಂಬಿಕಾ ಸಂಯುಕ್ತ ಪ್ರೌಢಶಾಲೆ (ಅನುದಾನಿತ ) ಶಾಲೆಯಲ್ಲಿ ಖಾಲಿ ಇರುವ 3 ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ನಿರ್ದೇಶಕರು (ಪ್ರೌಢ ಶಿಕ್ಷಣ) ಆಯುಕ್ತರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ಆದೇಶದ ಪ್ರಕಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
- ಶಿಕ್ಷಕ ಹುದ್ದೆಗಳ ವಿವರ
- ಸಹ ಶಿಕ್ಷಕ ವಿಜ್ಞಾನ (ಸಿಬಿಜಡ್), 1 ಹುದ್ದೆ, ಅರ್ಹತೆ: ಬಿ.ಎಸ್ಸಿ ಬಿ.ಇಡಿ, ಮೀಸಲಾತಿ: ಪ.ಪಂ (ಎಸ್ಟಿ)
- ಸಹ ಶಿಕ್ಷಕ ಹಿಂದಿ, 1 ಹುದ್ದೆ, ಅರ್ಹತೆ: ಬಿ.ಎ ಬಿ.ಇಡಿ, ಮೀಸಲಾತಿ: ಪ.ಜಾತಿ (ಎಸ್.ಸಿ.)
- ಸಹಶಿಕ್ಷಕ ಕನ್ನಡ, 1 ಹುದ್ದೆ, ಅರ್ಹತೆ: ಬಿ.ಎ ಬಿ.ಇಡಿ, ಮೀಸಲಾತಿ: ಸಾಮಾನ್ಯ ಅಭ್ಯರ್ಥಿ
ವಿಶೇಷ ಸೂಚನೆ: 1) ಆಯ್ಕೆ ಬಯಸುವ ಅಭ್ಯರ್ಥಿಗಳು ಒಂದು ಪ್ರತಿಯನ್ನು ಉಪನಿರ್ದೇಶಕರು ಸಾ.ಶಿ ಇಲಾಖೆ (ಆಡಳಿತ) ದಾವಣಗೆರೆ ಜಿಲ್ಲೆ ದಾವಣಗೆರೆ ಇವರಿಗೆ ಸಲ್ಲಿಸುವುದು. 2) ಅರ್ಹ ಅಭ್ಯರ್ಥಿಗಳು ಪೂರ್ಣ ಮಾಹಿತಿ ಹಾಗೂ ದೃಢೀಕೃತ ದಾಖಲೆ/ಗಳೊಂದಿಗೆ ಅರ್ಜಿಯನ್ನು ಈ ಜಾಹಿರಾತು ಪ್ರಕಟಣೆಯಾದ ೨೧ ದಿನಗಳ ಒಳಗಾಗಿ ಈ ಕೆಳಕಾಣಿಸಿದ ವಿಳಾಸಕ್ಕೆ ಅರ್ಜಿ ಸಲ್ಲಿಸಿ ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು ಸಾ.ಶಿ ಇಲಾಖೆ (ಆಡಳಿತ) ದಾವಣಗೆರೆ ಜಿಲ್ಲೆ ದಾವಣಗೆರೆ ಇವರಿಗೆ ಸಲ್ಲಿಸತಕ್ಕದ್ದು ಅರ್ಜಿಯ ಜೊತೆ ರೂ ೧೦೦೦/- (ಒಂದು ಸಾವಿರ ) ರಾಷ್ಟ್ರಿಕೃತ ಬ್ಯಾಂಕುಗಳ ಡಿ.ಡಿ /ಐ.ಪಿ.ಓ ಅನ್ನು ಅಧ್ಯಕ್ಷರು/ಕಾರ್ಯದರ್ಶಿಗಳು ಶ್ರೀ ದುರ್ಗಾಂಬಿಕಾ ವಿದ್ಯಾ ಸಂಸ್ಥೆ (ರಿ) ಶಿವಾಜಿ ನಗರ ದಾವಣಗೆರೆ- -577001 ಇವರ ಹೆಸರಲ್ಲಿ ಸಲ್ಲಿಸತಕ್ಕದ್ದು. ಸಂದರ್ಶನದ ದಿನಾಂಕವನ್ನು ಮುಂದೆ ತಿಳಸಲಾಗುವುದು. ನಿಗದಿ ಪಡಿಸಿದ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ:- 9483748275, 8310457481 ಸಂಪರ್ಕಿಸಿ.