ದಾವಣಗೆರೆ: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ದಾವಣಗೆರೆ ತಾಲ್ಲೂಕಿನ ಅಣಬೇರು ಗ್ರಾಮದ ಬಳಿಯ ಭದ್ರಾ ಕಾಲುವೆ ಕೊಚ್ಚಿ ಹೋಗಿದೆ. ಇದರಿಂದ ಅಪಾರ ಪ್ರಮಾಣದ ಕಾಲುವೆ ನೀರು ಬೆಳೆಗಳಿಗೆ ನುಗ್ಗಿದೆ. ಕಾಲುವೆ ಬಳಿಯ ಜಮೀನುಗಳು ಜಲಾವೃತಗೊಂಡಿವೆ. ದಾವಣಗೆರೆಯ ಜಿಲ್ಲೆಯಾದ್ಯಂತ ಕಳೆದ ಎರಡ್ಮೂರು ದಿನದಿಂದ ಭಾರೀ ಮಳೆಯಾಗುತ್ತಿದೆ. ನಿನ್ನೆ ರಾತ್ರಿ (ಅ.1) ಸಹ ಸತತ ಮಳೆಯಾಗಿದ್ದು, ಕಾಲುವೆ ನೀರಿನ ಜತೆ ಮಳೆ ನೀರು ಸೇರಿ ಕಾಲುವೆ ಹೊಡೆದು ಹೋಗಿದೆ. ಇದರಿಂದ ಭಾರೀ ಪ್ರಮಾಣ ನೀರು ಸೋರಿಕೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ಬೆಳೆ ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.