ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ನಗರ ಸೇರಿದಂತೆ ಸುತ್ತಮುತ್ತಲಿನ ಸಂಜೆಯಿಂದ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ.
ಕಳೆದ 15 ದಿನಗಳಿಂದ ಬಿಡುವು ನೀಡಿದ್ದ ಮಳೆ, ಇಂದು ಭಾರೀ ಮಳೆಯಾಗುತ್ತಿದೆ. ನಗರದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಸಂಜೆ 7.30ಕ್ಕೆ ಶುರುವಾರ ಮಳೆ ಇನ್ನು ಕೂಡ ಮುಂದುವರೆದಿದೆ. ಸತತ ಒಂದು ಗಂಟೆ ಕಾಲ ಭಾರೀ ಮಳೆಗೆ ಬೆಣ್ಣೆ ನಗರಿ ತತ್ತರಿಸಿ ಹೋಗಿದೆ.

ದಾವಣಗೆರೆ ನಗರ ಸೇರಿದಂತೆ ಶಾಮನೂರು, ಯರಗುಂಟೆ, ಬೇತೂರು, ಆವರಗೊಳ್ಳ, ಕೊಂಡಜ್ಜಿ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗುತ್ತಿದೆ. ಏಕಾಏಕಿ ಮಳೆ ಸುರಿಯುತ್ತಿದ್ದರಿಂದ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಜನರು ಪರದಾಡುತ್ತಿದ್ದಾರೆ.



