ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಮಾ.28 ರಂದು ಕ್ಯಾನ್ಸರ್ ಜಾಗೃತಿ ಹಾಗೂ ತಪಾಸಣಾ ಶಿಬಿರ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ. ಶ್ರೀ ವಿಶ್ವರಾಧ್ಯ ಕ್ಯಾನ್ಸರ್‌ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಆವರಗೆರೆಯ ನುರಿತ ವೈದ್ಯರಿಂದ ತಂಬಾಕು ಸಂಬಂಧಿತ ಕ್ಯಾನ್ಸರ್ ಮತ್ತು ಇತರೆ
ಕಾಯಿಲೆಗಳ, ಸ್ತನ ಕ್ಯಾನ್ಸರ್, ಗರ್ಭಗೊರಳಿನ ಕ್ಯಾನ್ಸರ್ ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ತಪಾಸಣೆಮಾಡಲಿದ್ದು, ಶಿಬಿರದಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ ಯಾವುದಾದರು ಗುರುತಿನಪತ್ರದ ಜೆರಾಕ್ಸ್‌ನ್ನು ತರಬೇಕಿದೆ. ಹೆಚ್ಚಿನ ಮಾಹಿತಿಗಾಗಿ ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಆನಂದ್ ಜ್ಯೋತಿ, ಮೊ9942299152 ನ್ನು ಸಂಪರ್ಕಿಸಿ.