ದಾವಣಗೆರೆ: ಹರಿಹರ ನಗರದ ಎಲ್ಲಾ ಆಸ್ತಿಗಳ ತೆರಿಗೆಯನ್ನು ಪಾವತಿಸಲು ಅನುಕೂಲ ಕಲ್ಪಿಸಲು ನಗರಸಭೆಯಲ್ಲಿ ಸೆ.20 ರಿಂದ ಜಾರಿಗೆ ಬರುವಂತೆ ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (BBPS) ನ್ನು ಅನುಷ್ಟಾನಗೊಳಿಸಿದೆ ಎಂದು ಹರಿಹರ ನಗರಸಭೆ ಆಯುಕ್ತರು ತಿಳಿಸಿದ್ದಾರೆ.
ಆಸ್ತಿ ಮಾಲೀಕರು ಇನ್ನು ಮುಂದೆ ಈ ಕೆಳಕಂಡ ಫೋನ್ ಪೇ, ಭಾರತ್ ಬಿಲ್ ಪೇ, ಬೀಮ್ ಆಪ್, ಪೇಟಿಎಂ, ಗೂಗಲ್ ಪೇ, ಆಪ್‍ಗಳ ಮೂಲಕ ಆನ್‍ಲೈನ್‍ನಲ್ಲಿ ತೆರಿಗೆ ಪಾವತಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಸ್ತಿ ಮಾಲಿಕರು ಮೂರನೆ ವ್ಯಕ್ತಿಗಳಿಗೆ ಯಾವುದೇ ರೀತಿಯ ನಗದನ್ನು ನೀಡದೇ ನೇರವಾಗಿ ಆನ್‍ಲೈನ್‍ನಲ್ಲಿ ಪಾವತಿಸಬಹುದಾಗಿದೆ.



