ದಾವಣಗೆರೆ: ಮೊಬೈಲ್ ನಲ್ಲಿ ಮಾತನಾಡುತ್ತ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾದ ಪರಿಣಾಮ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಬಳ್ಳಾರಿ ಮೂಲದ ಯುವತಿ ಸಾವು
ಹರಿಹರ ನಗರದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
ಶ್ರಾವಣಿ (23) ಮೃತ ದುರ್ದೈವಿ ಯುವತಿ. ಬಳ್ಳಾರಿ
ಮೂಲದ ಯುವತಿ ಮೈಸೂರಿನಲ್ಲಿ ಎಂಬಿಎ ಓದುತ್ತಿದ್ದ ಯುವತಿ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹರಿಹರ ನಗರದ ಸಂಬಂಧಿಕರ ಮನೆಗೆ ಬಂದಿದ್ದರು.
ಯುವತಿಯನ್ನು ಸ್ವೀಕರಿಸಲು ಸಂಬಂಧಿಯೊಬ್ಬರು ರೈಲು ನಿಲ್ದಾಣದಕ್ಕೆ ಬಂದಿದ್ದರು. ಅವರ ಜೊತೆ ಮಾತನಾಡುತ್ತ ನಿಲ್ದಾಣದ ಹಿಂಬದಿಯಿಂದ ರೈಲು ಹಳಿ ದಾಟಿ ಮನೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ.
ಯುವತಿಯನ್ನು ರಕ್ಷಿಸಲು ಸಂಬಂಧಿ, ಸಾರ್ವಜನಿಕರು ಪ್ರಯತ್ನಿಸಿದ್ದು, ರೈಲು ಡಿಕ್ಕಿ ಹೊಡೆದ ರಭಸಕ್ಕೆ ಯುವತಿಯ ತಲೆ ಮತ್ತು ಮುಖಕ್ಕೆ ಬಲವಾಗಿ ಪೆಟ್ಟು ಬಿದ್ದಿತ್ತು. ಕೂಡಲೇ ಸ್ಥಳೀಯರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದು, ಆ್ಯಂಬುಲೆನ್ಸ್ ಬಂದು ಪ್ರಥಮ ಚಿಕಿತ್ಸೆ ನೀಡುವಷ್ಟರಲ್ಲಿ ಯುವತಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.