ದಾವಣಗೆರೆ; ಹರಿಹರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎಸ್.ರಾಮಪ್ಪಗೆ ಕಾಂಗ್ರೆಸ್ ನ ನಾಲ್ಕನೇ ಪಟ್ಟಿಯಲ್ಲಿಯೂ ಟಿಕೆಟ್ ಕೈ ತಪ್ಪಿದೆ. ಹೊಸ ಮುಖ ಎನ್.ಎಚ್.ಶ್ರೀನಿವಾಸ್ ನಂದಿಗಾವಿಗೆ ಟಿಕೆಟ್ ಪೈನಲ್ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾಮಪ್ಪ (ಏ.19) ಬೆಂಬಲಿಗರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಯಲಿದೆ.
ಕಾಂಗ್ರೆಸ್ ಪಕ್ಷ ಹೊಸ ಮುಖಕ್ಕೆ ಮಣೆ ಹಾಕಿದ್ದು ಶಾಸಕ ಎಸ್. ರಾಮಪ್ಪನವರ ನಡೆ ಕುತೂಹ ಮೂಡಿಸಿದೆ. ಪಕ್ಷ ನೀಡಿದ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೋ ಅಥವಾ ಪಕ್ಷೇತರ ಸ್ಪರ್ಧೆಗೆ ತೀರ್ಮಾನ ಕೈಗೊಳ್ಳುತ್ತಾರೋ ಎಂಬುದು ಇನ್ನಷ್ಟೇ ನಿರ್ಧಾರ ಆಗಬೇಕಿದೆ.ಹಾಲಿ ಶಾಸಕ ಎಸ್.ರಾಮಪ್ಪ ಸೇರಿ ಒಟ್ಟು 9 ಮಂದಿ ಆಕಾಂಕ್ಷಿಗಳಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೆಸರುಗಳ ಕೇಳಿ ಬಂದಿತ್ತು. ಅಂತಿಮವಾಗಿ ಶ್ರೀನಿವಾಸ್‌ಗೆ ಅವಕಾಶ ಒದಗಿಸಿದೆ. ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಶ್ರೀನಿವಾಸ್ ಯಾವ ರೀತಿಯಲ್ಲಿ ಪೈಪೋಟಿ ನೀಡಬಲ್ಲರು ಎನ್ನುವುದನ್ನು ಕಾದು ನೋಡಬೇಕಿದೆ.



