ಹರಿಹರ; ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಶುಕ್ರವಾರ ಸಂಜೆ (5ಗಂಟೆ) ಗೋಧೂಳಿ ಸಮಯಕ್ಕೆ ಸರಿಯಾಗಿ ರಥತೋತ್ಸವ ನಡೆಯಿತು. ಪಟ್ಟಣದ ಎಲ್ಲ ದೇರುಗಳು ಪಲ್ಲಕಿ ಮೂಲಕ ರಥಕ್ಕೆ ಪ್ರದಕ್ಷಿಣೆ ಹಾಕಿದವು. ತಹಸೀಲ್ದಾರ್ ಪೃಥ್ವಿಸಾನಿಕಂ, ಉಪತಹಸೀಲ್ದಾರ್ ಆರ್. ರವಿ ರಥಕ್ಕೆ ಪೂಜೆ ಸಲ್ಲಿಸಿದರು. ಬಸವೇಶ್ವರ ಸ್ವಾಮಿ ರಥ ಏರಿದ ನಂತರ ಭಕ್ತರು ತೇರಿನ ಗಾಲಿಗೆ ಭಕ್ತರು ತೆಂಗಿನಕಾಯಿ ಹೊಡೆದರು. ಗೋಧೂಳಿ ಸಮಯಕ್ಕೆ ಸರಿಯಾಗಿ ರಥ ಎಳೆಯಲಾಯಿತು. ಭಕ್ತರು ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ರಥ ಸಾಗುವ ಮುಖ್ಯ ರಸ್ತೆ ಉದ್ದಕ್ಕೂ ಕುದುರೆ ಕುಣಿತ, ಹಲಗೆ, ಡೊಳ್ಳು, ನಂದಿಕೋಲು, ಭಜನಾ ಮಂಡಳಿಗಳ ಜಾನಪದ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ತಂದಿದ್ದವು. ಕಾಲ ಭೈರವ ಯುವಕರ ಸಂಘದಿಂದ ವಿವಿಧೆಡೆ ಭಕ್ತರಿಗೆ ಮಜ್ಜಿಗೆ ವಿತರಿಸಿದರು. ರಥೋ
ತ್ಸವಕ್ಕೂ ಮುನ್ನ ಶ್ರೀಬೀರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ನಡೆಯಿತು.



