ಹರಿಹರ: ಗ್ರಾಮದೇವತೆ ಜಾತ್ರೆ ಹಿನ್ನೆಲೆ ಆಯೋಜಿಸಿದ್ದ ಬೆಲ್ಲದ ಬಂಡಿ ಮೆರವಣಿಗೆಯಲ್ಲಿ ಎತ್ತೊಂದು ಬೆದರಿ, ಮೆರವಣಿಗೆ ನೋಡುತ್ತಿದ್ದ ವೃದ್ಧರೊಬ್ಬರಿಗೆ ಗುದ್ದಿದೆ. ಇದರ ಪರಿಣಾಮ ವೃದ್ಧ ಮೃತಪಟ್ಟ ಘಟನೆ ನಡೆದಿದೆ.
ದಾವಣಗೆರೆ: ಅಡಿಕೆ ಧಾರಣೆ; ಸತತ ಕುಸಿತ ಬಳಿಕ ಭರ್ಜರಿ ಏರಿಕೆ – ಮಾ.21ರ ದರ ಎಷ್ಟಿದೆ..?
ತಾಲ್ಲೂಕಿನ ರಾಮತೀರ್ಥ ಗ್ರಾಮದ ವೀರಾಚಾರಿ (72) ಮೃತ ವೃದ್ಧ. ಅಲಂಕಾರಗೊಂಡ ಎತ್ತುಗಳು ಮತ್ತು ಬೆಲ್ಲದ ಬಂಡಿಯ ಮೆರವಣಿಗೆ ನೀಡಲು ಶಿವಗೊಗ್ಗ ರಸ್ತೆಗೆ ಬಂದಾಗ ಹೋರಿ ಬೆದರಿ ಚಿನ್ನಾಟಿಕೆ ತೆಗೆದು ಜನತ್ತ ನುಗ್ಗಿತು. ಈ ವೇಳೆ ಮೆರವಣಿಗೆ ನೋಡುತ್ತಿದ್ದ ವೀರಾಚಾರಿಗೆ ಗುದ್ದಿದೆ. ಆಯತಪ್ಪಿ ನೆಲಕ್ಕೆ ಬಿದ್ದ ವೀರಾಚಾರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದರಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಧ್ಯರಾತ್ರಿ ಮೃತಪಟ್ಟಿದ್ದಾರೆ ಎಂದು ಅವರ ಮಗ ಕಾಳಾಚಾರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



